ಜೀರ್ಣಕ್ರಿಯೆ ಸುಧಾರಿಸಲು ಈ ಯೋಗ ಮಾಡಿ
ಜೀರ್ಣ ಕ್ರಿಯೆ ಮತ್ತು ಕರುಳಿನ ಆರೋಗ್ಯ ಸುಧಾರಿಸಲು ಯೋಗ ಪ್ರಧಾನ ಪಾತ್ರ ವಹಿಸುತ್ತದೆ. ಜೀರ್ಣ ಕ್ರಿಯೆ ಸುಧಾರಿಸಲು ಅನೇಕ ಯೋಗಾಸನಗಳಿವೆ. ಅದರಲ್ಲಿ ನಿಮಗೆ ಸುಲಭವಾಗಿ ಮಾಡಬಹುದಾದ ಧನುಶಾಸನದ ಮಾಡುವುದು ಹೇಗೆ ಎಂದು ಇಂದು ತಿಳಿದುಕೊಳ್ಳೋಣ.
ಕೇವಲ ಜೀರ್ಣಕ್ರಿಯೆ ಮಾತ್ರವಲ್ಲ, ಮುಟ್ಟಿನ ನೋವು, ಮಲಬದ್ಧತೆ ಇತ್ಯಾದಿ ಸಮಸ್ಯೆಗಳಿಗೂ ಇದು ಪರಿಹಾರ ನೀಡುತ್ತದೆ. ಹೊಟ್ಟೆಯ ಮೇಲೆ ನೇರವಾಗಿ ಕಾಲು ಚಾಚಿಕೊಂಡು ಮಲಗಿ. ಎರಡೂ ಕೈಗಳನ್ನು ಬದಿಗೆ ಸರಿಸಿಟ್ಟುಕೊಳ್ಳಬೇಕು. ಈಗ ಮೊಣಕಾಲುಗಳನ್ನು ನಿಧಾನವಾಗಿ ಮಡಚಿ ಮತ್ತು ಕೈಗಳಿಂದ ಕಣಕಾಲುಗಳನ್ನು ನಿಮ್ಮ ತಲೆಯ ಕಡೆಗೆ ಎಳೆದುಕೊಳ್ಳಿ. ಬಾಗಿಸಿದ ಕಾಲುಗಳನ್ನು ಸೊಂಟಕ್ಕಿಂತ ಮೇಲೆ ಬಾರದಂತೆ ನೋಡಿಕೊಳ್ಳಿ. ಕಾಲುಗಳನ್ನು ಸೊಂಟದ ಕಡೆಗೆ ಬಾಗಿಸುವಾಗ ತೊಡೆ ನಿಧಾನವಾಗಿ ಮೇಲೆತ್ತಿ. ಈಗ ಮುಖ ಮತ್ತು ಎದೆಯ ಭಾಗವನ್ನು ಮೇಲೆತ್ತಿ ಕೆಲವು ಸೆಕೆಂಡು ಇದೇ ಭಂಗಿಯಲ್ಲಿರುವಂತೆ ನೋಡಿಕೊಳ್ಳಿ. ಈ ರೀತಿ ನಿಯಮಿತವಾಗಿ ಮಾಡುತ್ತಿದ್ದರೆ ನಿಮ್ಮ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆಯಾಗುತ್ತವೆ.