ಕಟಿ ಎಂದರೆ ಸೊಂಟ. ಆದ್ದರಿಂದ ಕಟಿ ಚಕ್ರಾಸನ ಎಂದರೆ ಸೊಂಟವನ್ನು ಚಕ್ರಾಕೃತಿಯಲ್ಲಿ ತಿರುಗಿಸುವುದು ಎಂದರ್ಥ.
ವಿಧಾನ :
ನೇರವಾಗಿ ನಿಲ್ಲಿ, ಕೈಗಳು ನೇರವಾಗಿರಲಿ. ಜೊತೆಗೆ ಬೆನ್ನು ಮತ್ತು ಕುತ್ತಿಗೆ ಹಾಗೂ ದೃಷ್ಟಿಯೂ ನೇರವಾಗಿರಲಿ.
ಈಗ ಅರ್ಧ ಮೀಟರ್ ಅಂತರದಲ್ಲಿ ಪಾದಗಳನ್ನು ಇರಿಸಿ, ಮುಂಗೈ ನೆಲಮುಖವಾಗಿ ಕೈಗಳನ್ನು ದೇಹದಿಂದ ದೂರಕ್ಕೆ ಚಾಚಿರಿ.ಎಡಕೈಯನ್ನು ಬಲಭುಜಕ್ಕೆ ತಂದು, ಬಲಭಾಗದ ಚಿತ್ರದಲ್ಲಿರುವಂತೆ ಬಲಕೈಯನ್ನು ಹಿಂದಕ್ಕೆ ತಿರುಗಿಸಿ. ನಂತರ, ಬಲಕೈಯನ್ನು ಸೊಂಟದ ಎಡಭಾಗಕ್ಕೆ ತಂದು, ಬಲ ಭುಜದ ಮೇಲ್ಬಾಗದಿಂದ ಎಷ್ಟು ದೂರ ಸಾಧ್ಯವೋ ಅಷ್ಟು ದೂರ ದೃಷ್ಟಿ ಹಾಯಿಸಿ.
WD
ಇದೇ ಭಂಗಿಯಲ್ಲಿ ಕೆಲವು ಸೆಕೆಂಡು ಇದ್ದು ನಂತರ ಪ್ರಾರಂಭದ ಭಂಗಿಗೆ ಮರಳಿ.ಈ ಆಸನದ ಒಂದು ಸುತ್ತನ್ನು ಪೂರ್ಣಗೊಳಿಸಲು ಇನ್ನೊಂದು ಭಾಗಕ್ಕೂ ಇದೇ ವಿಧಾನವನ್ನು ಅನುಸರಿಸಿ.
ಎಚ್ಚರಿಕೆ :
ಕತ್ತು ಮತ್ತು ಸೊಂಟ ನೋವು ಉಳ್ಳವರು ಈ ಆಸನವನ್ನು ಮಾಡುವುದು ಸೂಕ್ತವಲ್ಲ.
ಪ್ರಯೋಜನ :
ಈ ಆಸನವು ಸೊಂಟ, ಪೃಷ್ಠ, ತೊಡೆಗಳ ಕೊಬ್ಬನ್ನು ನಿವಾರಿಸಿ, ಈ ಭಾಗಗಳನ್ನು ಶಕ್ತಿಯುತವಾಗಿಸುತ್ತದೆ. ಅಲ್ಲದೆ, ದೈಹಿಕ ಆಯಾಸ ಮತ್ತು ಮಾನಸಿಕ ಒತ್ತಡವನ್ನು ನಿರ್ಮೂಲನ ಮಾಡುತ್ತದೆ.