ಅಪಾಯವಿಲ್ಲದ ಬದುಕಿಗೆ ಆತಂಕವೂ ಬೇಕಂತೆ

WDWD
ಆಂತಕ ಒಳ್ಳೆಯದಲ್ಲ ಎಂಬುದು ಜನಸಾಮಾನ್ಯರ ನಂಬುಗೆ. ಇದು ಚಿಕಿತ್ಸೆ ಯೋಗ್ಯ ಸಮಸ್ಯೆ ಎಂದು ವೈದ್ಯರು ಹೇಳಬಹುದು. ಆದರೆ ಒಂದು ಮಟ್ಟದ ತನಕದ ಆತಂಕವು ನಮ್ಮನ್ನು ಸುರಕ್ಷಿತವಾಗಿ ಮತ್ತು ಸುಭದ್ರವಾಗಿಡಲು ಸಹಕರಿಸುತ್ತದಂತೆ!

ಆತಂಕವು ಸಂಭನೀಯ ಕೆಟ್ಟ ನಿರ್ಧಾರ ಕೈಗೊಳ್ಳುವ ಕುರಿತಂತೆ ನಮ್ಮನ್ನು ಎಚ್ಚರಿಸುವ ದೇಹ ಮತ್ತು ಮನಸ್ಸಿನ ವಿಧಾನವಾಗಿರಬಹುದು ಎಂದು ಮನಶಾಸ್ತ್ರಜ್ಞರು ಹೇಳುತ್ತಾರೆ.

ಆತಂಕವು ಒತ್ತಡ ಮತ್ತು ಫೋಬಿಯಾಗಳಿಗೆ ಹಾದಿಯಾಗುತ್ತದಾದರೂ, ಸೈಕೋಲಾಜಿಕಲ್ ಸಯನ್ಸ್ ಮತ್ತು ಆಂಕ್ಸೈಟಿ ಪತ್ರಿಕೆಯಲ್ಲಿ, ಈ ತಿಂಗಳಲ್ಲಿ ಪ್ರಕಟವಾಗಿರುವ ಅಧ್ಯಯನ ಒಂದು, ಆತಂಕವು ಕೆಲವು ಕ್ರಿಯಾಶೀಲ ಮೌಲ್ಯಗಳನ್ನು ಹೊಂದಿದ್ದು ಇದು ನಮಗೆ ಕೆಡುಕುಗಳನ್ನು ತಪ್ಪಿಸುವಿಕೆಯನ್ನು ಕಲಿಸುತ್ತದೆ ಎಂದು ಹೇಳಿದೆ.

'ಅಂಟೇರಿಯರ್ ಇನ್ಸುಲಾ' ಎಂಬ ಮೆದುಳಿನ ಒಂದು ಭಾಗವು ಕೆಡುಕುಗಳನ್ನು ಊಹಿಸುವ ಮತ್ತು ಅವುಗಳ ನಿವಾರಣೆಯ ಪಾತ್ರವನ್ನು ವಹಿಸುತ್ತದೆ ಎಂದು ಸ್ಟಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಮನಶಾಸ್ತ್ರಜ್ಞರ ತಂಡ ಒಂದು ಹೇಳಿದೆ.

ತಾವು ಹಣಕಳೆದುಕೊಳ್ಳಲಿದ್ದೇವೆ ಎಂಬ ಆತಂಕದಲ್ಲಿದ್ದ, ಆರೋಗ್ಯವಂತರ ವಯಸ್ಕರ ಮೆದುಳನ್ನು ಸ್ಕ್ಯಾನ್ ಮಾಡಿದಾಗ, ಹಣಕಾಸು ತೊಂದರೆಗಳನ್ನು ತಪ್ಪಿಸಿಕೊಳ್ಳುವ ಮಾರ್ಗವನ್ನು ಕಲಿಯುವಲ್ಲಿ ಇವರ ಇನ್ಸುಲಾ ಹೆಚ್ಚು ಕ್ರಿಯಾಶೀಲವಾಗಿತ್ತು ಎಂಬುದನ್ನು ಅಧ್ಯಯನ ಕಂಡುಕೊಂಡಿದೆ.

ಇದಕ್ಕೆ ವೈರುಧ್ಯವೆಂಬಂತೆ, ಕಡಿಮೆ ಮಟ್ಟದ ಇನ್ಸುಲಾಗಳಿರುವ ವ್ಯಕ್ತಿಗಳು ನಷ್ಟಗಳನ್ನು ತಪ್ಪಿಸಿಕೊಳ್ಳುವುದನ್ನು ತಿಳಿದುಕೊಳ್ಳಲು ಹೆಚ್ಚು ಸಮಯ ಪಡೆದುಕೊಂಡಿದ್ದು, ಪರಿಣಾಮ ಹೆಚ್ಚು ಹಣಕಾಸು ನಷ್ಟವನ್ನನುಭವಿಸಿದ್ದರು.

ಅದಾಗ್ಯೂ, ಮಿತಿಗಿಂತ ಹೆಚ್ಚಿನ ಮಟ್ಟದಲ್ಲಿ ಇನ್ಸುಲಾ ಕ್ರಿಯಾಶೀಲತೆಯು, ಸಮಸ್ಯೆಯನ್ನು ಸಾಕ್ಷೀಕಿಸಬಹುದು. ಪದೇಪದೇ ಭೀತಿಯುಂಟಾಗುವ ಮತ್ತು ಆತಂಕಕ್ಕೀಡಾಗುವ ವ್ಯಕ್ತಿಗಳಲ್ಲಿ ಅಸಹಜ ರೀತಿಯ ಇನ್ಸುಲಾ ಕ್ರೀಯಾಶೀಲತೆಯನ್ನು ಅಧ್ಯಯನಗಳು ತೋರಿಸಿವೆ.

ಹಾಗಾಗಿ ಹೆಚ್ಚಿನ ಮಟ್ಟದ ಇನ್ಸುಲಾ ಕ್ರೀಯಾಶೀಲತೆಯು ಆತಂಕ ಮತ್ತು ಫೋಬಿಯಾಗಳ ಅಪಾಯವನ್ನು ಹೆಚ್ಚಿಸಿದೆ. ಆದರೆ ಉತ್ತಮ ಮಟ್ಟದಲ್ಲಿ ಸಹಜ ರೀತಿಯ ಇನ್ಸುಲಾ ಕ್ರಿಯಾಶೀಲತೆಯು ಕೆಡುಕಿನ ಸಂದರ್ಭಗಳನ್ನು ತಡೆಯಲು ಸಹಕರಿಸುತ್ತದೆ ಎಂದು ಅಧ್ಯಯನ ಹೇಳಿದೆ.

ವೆಬ್ದುನಿಯಾವನ್ನು ಓದಿ