ಸಪೂರವಾಗಬೇಕಿದ್ದರೆ ಪುರುಷರನ್ನು ಅನುಸರಿಸಿ

ಶುಕ್ರವಾರ, 23 ಜನವರಿ 2009 (12:46 IST)
ಹೆಂಗಸರು ಗಂಡಸರನ್ನು ಅನುಸರಿಸಬೇಕಂತೆ. ಮತ್ತೆ ಮಾಡ್ತಾ ಇರೋದ್ ಏನ್ ಸ್ವಾಮಿ ಆಂತ ಸಂಪ್ರದಾಯಸ್ಥ ಮಹಿಳೆಯರು ಕೇಳಬಹುದಾದರೂ ಇದು ತೂಕಕಳೆದುಕೊಳ್ಳಬೇಕಿರುವ ಮಹಿಳೆಯರಿಗೆ ಆಸ್ಟ್ರೆಲಿಯಾದ ತಜ್ಞರು ನೀಡಿರುವ ಸಲಹೆ.

ಹೆಂಗಸರು ತ್ವರಿತವಾಗಿ ತೂಕ ಕಮ್ಮಿಮಾಡಿಕೊಳ್ಳಬೇಕೆಂಬ ಇರಾದೆ ಹೊಂದಿದ್ದರೆ, ಅವರು ಗಂಡಸರಂತೆ ಸ್ನಾಯು ಶಕ್ತ ದೇಹ ಬೆಳೆಸಿಕೊಂಡರೆ, ತೂಕಕಳೆದುಕೊಳ್ಳಲು ಹೆಚ್ಚು ಅನುಕೂಲ ಎಂದು ಶರೀರ ವಿಜ್ಞಾನ ತಜ್ಞರು ಹೇಳಿದ್ದಾರೆಂದು ಹೆರಾಲ್ಡ್ ಸನ್ ಪತ್ರಿಕೆ ಉಲ್ಲೇಖಿಸಿದೆ.

"ಪುರುಷರಲ್ಲಿ ಹೆಚ್ಚು ಮಸಲ್ ಮಾಸ್ ಇರುವ ಕಾರಣ ಅವರಲ್ಲಿ ಹೆಚ್ಚು ಮೆಟಬಾಲಿಕ್ ಆಗಿ ಹೆಚ್ಚು ಸಕ್ರಿಯ ಬಾಡಿಗಳನ್ನು ಹೊಂದಿರುತ್ತಾರೆ. ಮಸಲ್‌ಗಳು ಕೊಬ್ಬಿಗಿಂತ ಹೆಚ್ಚು ಕಿಲೋಜೆಲ್ಸ್‌ಗಳನ್ನು ಬಳಸುವ ಕಾರಣ ಹೆಚ್ಚು ಮಸಲ್ ಮಾಸ್ ಹೊಂದಿರುವುದು ಅಗತ್ಯ, ಯಾಕೆಂದರೆ ಇದು ಜೀರ್ಣಕ್ರೀಯೆಯನ್ನು ಹೆಚ್ಚಿಸುತ್ತದೆ" ಎಂಬುದಾಗಿ ವ್ಯಾಯಾಮ ತಜ್ಞೆಯಾಗಿರುವ ಮೆಲಿಸ್ಸಾ ಅಕ್ರಿನ್‌ಸ್ಟಾಲ್ ಹೇಳಿದ್ದಾರೆ.

ತೂಕಕಳೆದು ಕೊಳ್ಳಬೇಕಿರುವ ಮಹಿಳೆಯರು ತಮ್ಮ ಮೆಟಬಾಲಿಸಮ್(ಜೀರ್ಣಾಂಗ ಕ್ರೀಯೆ) ಹೆಚ್ಚಿಸಿ ಹೆಚ್ಚು ತೆಳುವಾದ ಸ್ನಾಯುವನ್ನು ನಿರ್ಮಮಾಣ ಮಾರ್ಗ ಕಂಡುಕೊಳ್ಳಬೇಕು. ದೈನಂದಿನ ವ್ಯಾಯಾಮದಿಂದ ಇದು ಸಾಧ್ಯ.

ನಿಮ್ಮ ಮೆಟಬಾಲಿಸಂ ಹೆಚ್ಚಿಸಬೇಕಿದ್ದರೆ, ಮಸಲ್ ಮಾಸ್ ಹೆಚ್ಚಿಸುವುದು ಅತ್ಯಗತ್ಯ ಎಂದು ಅಕ್ರಿನ್‌ಸ್ಟಾಲ್ ಹೇಳಿದ್ದಾರೆ. ಹೆಚ್ಚು ಮಸಲ್ ಮಾಸ್ ಹೊಂದಿರುವುದೆಂದರೆ, ಮೆಟಬಾಲಿಕ್ ಆಗಿ ಹೆಚ್ಚು ಸಕ್ರಿಯವಾಗಿರುವುದು ಎಂಬರ್ಥ. ಇದರ ಫಲವಾಗಿ ನಿಮ್ಮ ಶರೀರವು ಆಹಾರವನ್ನು ಕರಗಿಸಲು ಹೆಚ್ಚು ಶಕ್ತಿ ಬಳಸುತ್ತದೆ. ಹಾಗಾಗಿ ಸಾಮಾನ್ಯವಾಗಿ ಪುರುಷರಲ್ಲಿ ಜೀರ್ಣಕ್ರಿಯೆ ಸಾಮರ್ಥ್ಯವು ಮಹಿಳೆಯರಿಗಿಂತ ಹೆಚ್ಚಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಮಹಿಳೆಯರಲ್ಲಿ ಕಡಿಮೆ ಮಟ್ಟದ ಟೆಸ್ಟೋಸ್ಟಿರೋನ್ ಇರುವ ಕಾರಣ ಅವರು ಕಡಿಮೆ ಸ್ನಾಯು ಗಾತ್ರದೊಂದಿಗೆ ಹೆಚ್ಚು ಶಕ್ತಿವಂತರಾಗಿರುತ್ತಾರೆ ಎಂದೂ ಅವರು ಹೇಳಿದ್ದಾರೆ.

ಪಥ್ಯತಜ್ಞೆ ಲಿಸಾ ಸೂಥರ್ಲ್ಯಾಂಡ್ ಅವರು ಹೇಳುವ ಪ್ರಕಾರವೂ ಮಹಿಳೆಯರಿಗೆ ತೂಕನೀಗುವ ತರಬೇತಿಯು ಸುದೀರ್ಘ ಕಾಲದ ಅನುಕೂಲಗಳನ್ನು ನೀಡುತ್ತದೆ. ಅದು ಫಿಟ್‌ನೆಸ್‌ನೊಂದಿಗೆ ಮೂಳೆಯ ಬಲವನ್ನು ಹೆಚ್ಚಿಸುತ್ತದೆ.

ನೀವೊಬ್ಬ ಮಹಳೆಯಾಗಿದ್ದು ದಿನನಿತ್ಯ ಬಲಪ್ರಯೋಗದ ವ್ಯಾಯಾಮ ಮಾಡುತ್ತಿದ್ದರೆ, ನಿಮಗೆ ನಿಮ್ಮ ಮೂಳೆಗಳು ವಂದಿಸುತ್ತವೆ ಎಂದೂ ಸೂಥರ್‌ಲ್ಯಾಂಡ್ ಹೇಳಿದ್ದಾರೆ.

ಹಾಗಾಗಿ, ದಪ್ಪದ ಮಹಿಳೆಯರೇ, ಎದ್ದೇಳಿ ಕಠಿಣತಮ ವ್ಯಾಯಾಮವನ್ನು ಮೈಗೂಡಿಸಿಕೊಂಡು ಶಕ್ತಿಶಾಲಿಯಾಗಿರಿ ಮತ್ತು ಫಿಗರ್ ಮೆಂಟೇನ್ ಮಾಡಿರಿ.

ವೆಬ್ದುನಿಯಾವನ್ನು ಓದಿ