ಬಿಸ್ಕೆಟ್

ಬೇಕಾಗುವ ಸಾಮಗ್ರಿ- 150 ಗ್ರಾಂ ಆಲ್ ಪರ್ಪಸ್ ಫ್ಲೋರ್, ಕಾಲು ಚಮಚ ಬೇಕಿಂಗ್ ಪೌಡರ್, 120 ಗ್ರಾಂ ಬೆಣ್ಣೆ, 90 ಗ್ರಾಂ ಸಕ್ಕರೆ, ಅರ್ಧ ಮೊಟ್ಟೆ, ಸ್ವಲ್ಪ ವೆನಿಲ್ಲಾ, 50 ಗ್ರಾಂ ಪುಡಿ ಮಾಡಿದ ಕಾರ್ನ್‌ಫ್ಲೇಕ್.

ಮಾಡುವ ವಿಧಾನ- ಆಲ್ ಪರ್ಪಸ್ ಫ್ಲೋರ್ ಹಾಗೂ ಬೇಕಿಂಗ್ ಪೌಡರನ್ನು ಚೆನ್ನಾಗಿ ಮಿಕ್ಸ್ ಮಾಡಿ. ಸಕ್ಕರೆ ಮತ್ತು ಬೆಣ್ಣೆಯನ್ನು ಇನ್ನೊಂದು ಬೌಲ್‌ನಲ್ಲಿ ಪ್ರತ್ಯೇಕವಾಗಿ ಮಿಕ್ಸ್ ಮಾಡಿ. ಇನ್ನೊಂದು ಬೌಲ್‌ನಲ್ಲಿ ವೆನಿಲ್ಲಾ ಹಾಗೂ ಮೊಟ್ಟೆ ಮಿಕ್ಸ್ ಮಾಡಿ. ನಂತರ ಮೊಟ್ಟೆ-ವೆನಿಲ್ಲಾದ ಮಿಶ್ರಣಕ್ಕೆ ಬೆಣ್ಣೆ-ಸಕ್ಕರೆಯ ಮಿಶ್ರಣ ಸೇರಿಸಿ. ನಂತರ ಈ ಮಿಶ್ರಣಕ್ಕೆ ಆಲ್ ಪರ್ಪಸ್ ಫ್ಲೋರ್ ಹಾಗೂ ಬೇಕಿಂಗ್ ಪೌಡರ್ ಮಿಶ್ರಣವನ್ನೂ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿದಾಗ ಇದೊಂದು ಗಟ್ಟಿ ಪೇಸ್ಟಿನಂತಾಗುತ್ತದೆ. ಈ ಗಟ್ಟಿ ಪೇಸ್ಟನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ಅದನ್ನು ಕಾರ್ನ್ ಫ್ಲೇಕ್ ಪುಡಿಯಲ್ಲಿ ಹೊರಳಿಸಿ. ಈ ತುಂಡುಗಳನ್ನು ಬೇಕಿಂಗ್ ಟ್ರೇನಲ್ಲಿಟ್ಟು 12 ನಿಮಿಷಗಳ ಕಾಲ 350 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ ಬೇಯಿಸಿ. ಬಿಸ್ಕೆಟ್ ಸಿದ್ಧ.

ವೆಬ್ದುನಿಯಾವನ್ನು ಓದಿ