ಡೇಟ್ (ಖರ್ಜೂರ) ಡಿಲೈಟ್

ಬೇಕಾಗುವ ಸಾಮಗ್ರಿ- 150 ಗ್ರಾಂ ಸಣ್ಣದಾಗಿ ಕತ್ತರಿಸಿದ ಖರ್ಜೂರ, 250 ಎಂಎಲ್ ಕುದಿಯುವ ನೀರು, ಕಾಲು ಚಮಚ ಸೋಡಾ ಬೈಕಾರ್ಬೋನೇಟ್, 60 ಗ್ರಾಂ ಬೆಣ್ಣೆ, 200 ಗ್ರಾಂ ಸಕ್ಕರೆ, ಒಂದು ಮೊಟ್ಟೆ, ಕಾಲು ಚಮಚ ವೆನಿಲ್ಲಾ, 225 ಗ್ರಾಂ ಆಲ್ ಪರ್ಪಸ್ ಫ್ಲೋರ್, ಒಂದು ಚಿಟಿಕೆ ಉಪ್ಪು, 50 ಗ್ರಾಂ ನಟ್ಸ್ (ಗೋಡಂಬಿ, ಪಿಸ್ತಾ, ಒಣದ್ರಾಕ್ಷಿ...)

ಮಾಡುವ ವಿಧಾನ- ಕುದಿಯುತ್ತಿರುವ ನೀರಿಗೆ ಕತ್ತರಿಸಿದ ಖರ್ಜೂರ ಹಾಗೂ ಸೋಡಾ ಬೈಕಾರ್ಬೋನೇಟ್ ಹಾಕಿ. ಬೆಣ್ಣೆ ಹಾಗೂ ಸಕ್ಕರೆಯನ್ನು ಬೀಟ್ ಮಾಡಿ ಪ್ರತ್ಯೇಕವಾಗಿ ಇನ್ನೊಂದು ಪಾತ್ರೆಯಲ್ಲಿಡಿ. ಇದಕ್ಕೆ ಮೊಟ್ಟೆ, ವೆನಿಲ್ಲಾ ಹಾಕಿ ಮತ್ತೊಮ್ಮೆ ಬೀಟ್ ಮಾಡಿ. ಆಲ್ ಪರ್ಪಸ್ ಫ್ಲೋರನ್ನು ಶೋಧಿಸಿ ಬೇಕಿಂಗ್ ಪೌಡರ್, ಉಪ್ಪು ಹಾಕಿ. ಇದೇ ಸಂದರ್ಭ ಖರ್ಜೂರದ ಮಿಶ್ರಣವನ್ನು ಬೆಣ್ಣೆಯ ಮಿಶ್ರಣಕ್ಕೆ ಸೇರಿಸಿ. ಕತ್ತರಿಸಿದ ನಟ್ಸ್ ಸೇರಿಸಿ. ಉಳಿದೆಲ್ಲವನ್ನೂ ಸೇರಿಸಿ ಪ್ರಿಹೀಟೆಡ್ ಓವನ್‌ನಲ್ಲಿ 30ರಿಂದ 40 ನಿಮಿಷಗಳ ಕಾಲ 180 ಡಿಗ್ರಿ ಸೆಟಿಗ್ರೇಡ್‌ನಲ್ಲಿ ಬೇ್ ಮಾಡಿ. ನಂತರ ಹೊರತಗೆದು ತಂಪಾಗಲು ಬಿಡಿ. ತಂಪಾದ ನಂತರ ಸಣ್ಣದಾಗಿ ಕತ್ತರಿಸಿ.

ವೆಬ್ದುನಿಯಾವನ್ನು ಓದಿ