ತುಳಸಿ ಕಟ್ಟೆಯನ್ನು ಯಾವ ದಿಕ್ಕಿನಲ್ಲಿ ಕಟ್ಟಿಸಿದರೆ ಒಳ್ಳೆಯದು ಗೊತ್ತಾ…?

ಮಂಗಳವಾರ, 23 ಜನವರಿ 2018 (06:45 IST)
ಬೆಂಗಳೂರು : ತುಳಸಿಯನ್ನು ದೇವರೆಂದು ಸಾಕ್ಷಾತ್ ಮಹಾಲಕ್ಷ್ಮೀ ಎಂದು ಮನೆಯಲ್ಲಿಟ್ಟು ಪೂಜಿಸುತ್ತಾರೆ. ಹಾಗಾಗಿ ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಕಟ್ಟೆ ಇದ್ದೆ ಇರುತ್ತದೆ. ಆದರೆ ಅದು ಯಾವ ದಿಕ್ಕಿಗಿದ್ದರೆ ಒಳ್ಳೆಯದು ಎಂಬುದನ್ನು ತಿಳಿದುಕೊಂಡಿರಬೇಕು.


ಮನೆಯಲ್ಲಿ ತುಳಸಿ ಕಟ್ಟೆ ಕಟ್ಟಿಸುವಾಗ ಅದಕ್ಕೆ ಪ್ರದಕ್ಷಿಣಿ  ಹಾಕುವಷ್ಟು ಜಾಗವನ್ನು ಬಿಟ್ಟು ಕಟ್ಟಬೇಕು. ಗೋಡೆಗಳಿಗೆ ಅಂಟಿಕೊಂಡಿರುವಂತೆ ತುಳಸಿ ಕಟ್ಟೆಗಳನ್ನು ನಿರ್ಮಿಸಬಾರದು. ವಾಯುವ್ಯ ಅಥವಾ ಪೂರ್ವ ವಾಯುವ್ಯ ದಿಕ್ಕಿನಲ್ಲಿ ನೆಲಮಟ್ಟಕ್ಕಿಂತ ಎತ್ತರದಲ್ಲಿ ತುಳಸಿ ಕಟ್ಟೆಯನ್ನು ನಿರ್ಮಿಸಬೇಕು. ದಕ್ಷಿಣ ದಿಕ್ಕಿನಲ್ಲಿ ತುಳಸಿ ಕಟ್ಟೆ ನಿರ್ಮಿಸುವುದಾದರೆ ನೆಲಮಟ್ಟಕ್ಕಿಂತ ಮೇಲೆ ಅಥವಾ ತಗ್ಗುಗಳಲ್ಲಿರುವಂತೆ ನೋಡಿಕೊಳ್ಳಬೇಕು. ಈಶಾನ್ಯ ದಿಕ್ಕಿನಲ್ಲಿ ತುಳಸಿ ಕಟ್ಟೆಯನ್ನು ಕಟ್ಟಬಾರದು. ಆದರೆ ಇತ್ತಿಚೆಗೆ ಕೆಲವರು ತುಳಸಿ ಕಟ್ಟೆಯನ್ನು ಕಟ್ಟದೆ ಹೂವಿನ ಕುಂಡದಲ್ಲಿ ತುಳಸಿ ಗಿಡವನ್ನು ನೆಟ್ಟು ಪೂಜಿಸುತ್ತಾರೆ. ಆದರೆ ಹೀಗೆ ಮಾಡುವವರು ದಕ್ಷಿಣ ಆಗ್ನೇಯ ದಿಕ್ಕಿನಲ್ಲಿ  ಅದನ್ನು ಇಟ್ಟು ಪೂಜಿಸುವುದು ಉತ್ತಮ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ