ದಟ್ಟ ಹುಬ್ಬು ಬೇಕೆಂದರೆ ಈ ಎಣ್ಣೆ ಹಚ್ಚಿ!

ಮಂಗಳವಾರ, 6 ಫೆಬ್ರವರಿ 2018 (08:40 IST)
ಬೆಂಗಳೂರು: ದಟ್ಟವಾದ ಹುಬ್ಬಿನ ಕೂದಲು ಇದ್ದರೆ ಕಾಜಲ್ ನ ಅಗತ್ಯವೇ ಇರಲ್ಲ. ಐಬ್ರೋ ಶೇಪ್ ಮಾಡಿದರೂ ಸುಂದರವಾಗಿ ಕಾಣುತ್ತೀರಿ. ಹಾಗಾದರೆ ದಟ್ಟ ಹುಬ್ಬು ಬೇಕೆಂದರೆ ಏನು ಮಾಡಬೇಕು?
 

ಆಲಿವ್ ಎಣ್ಣೆ
ಆಲಿವ್ ಎಣ್ಣೆಯಲ್ಲಿ ವಿಟಮಿನ್ ಇ, ಎ ಅಂಶ ಹೇರಳವಾಗಿದೆ. ಇದು ಕೂದಲು ಬೆಳವಣಿಗೆಗೆ ಉತ್ತಮ. ಹಾಗಾಗಿ ಈ ಎಣ್ಣೆ ಹಚ್ಚಿಕೊಳ್ಳುತ್ತಿದ್ದರೆ ಸಾಕು.

ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುತ್ತಿದ್ದರೆ, ಹುಬ್ಬಿನ ಸುತ್ತ ಚರ್ಮ ತೇವಾಂಶ ಕಳೆದುಕೊಳ್ಳುವುದಿಲ್ಲ. ಇದು ಕೂದಲ ಬೆಳವಣಿಗೆ ಸಹಕಾರಿ.

ಹರಳೆಣ್ಣೆ
ಫ್ಯಾಟೀ ಆಸಿಡ್ ಮತ್ತು ಪೋಷಕಾಂಶಗಳು ಹೇರಳವಾಗಿರುವ ಹರಳೆಣ್ನೆ ಕೂದಲಿನ ಗುಣ ಮಟ್ಟ ಉತ್ತಮಪಡಿಸುತ್ತದೆ. ಕೆಲವರಿಗೆ ಇದು ಅಲರ್ಜಿಕಾರಕವಾಗಬಹುದು. ಹಾಗಾಗಿ ಪರೀಕ್ಷಿಸಿಯೇ ಹಚ್ಚಿಕೊಳ್ಳುವುದು ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ