ಫುಡ್ ಪಾಯಿಸನ್ ಆದರೆ ಏನು ಮಾಡಬೇಕು?

ಸೋಮವಾರ, 5 ಫೆಬ್ರವರಿ 2018 (08:38 IST)
ಬೆಂಗಳೂರು: ಹೊರಗಿನ ಊಟ ಕೆಲವೊಮ್ಮೆ ಹೊಟ್ಟೆ ಹಾಳು ಮಾಡುತ್ತದೆ. ಇದರಿಂದಾಗಿ ಫುಡ್ ಪಾಯಿಸನ್ ಆಗುವುದು ಸಹಜ. ಹೀಗಾದರೆ ಏನು ಮಾಡಬೇಕು ನೋಡೋಣ.
 

ದ್ರವಾಂಶ
ಫುಡ್ ಪಾಯಿಸನ್ ಆದರೆ ವಾಂತಿ, ಬೇಧಿ ಸಹಜ. ಹೀಗಾಗಿ ಶರೀರದಿಂದ ಸಾಕಷ್ಟು ದ್ರವಾಂಶ ಹೊರ ಹೋಗುತ್ತದೆ. ಇದಕ್ಕಾಗಿ ದ್ರವಾಂಶ ಆದಷ್ಟು ಹೆಚ್ಚು ಸೇವಿಸುತ್ತಿರಿ. ನಿಂಬೆ ಹಣ್ಣಿನ ಜ್ಯೂಸ್ ಅಥವಾ ಬಿಸಿ ಬಿಸಿ ನೀರಿನ ಸೇವನೆ, ಎಳೆ ನೀರು ಸೇವಿಸುತ್ತಿದ್ದರೆ ಉತ್ತಮ.

ಲಘು ಆಹಾರ
ಜೀರ್ಣವಾಗಲು ಕಠಿಣವಾದ ಆಹಾರಗಳನ್ನು ಆದಷ್ಟು ದೂರವಿಡಿ. ಗಂಜಿ, ಬಾಳೆಹಣ್ಣು, ಸಲಾಡ್ ಗಳನ್ನು ಸೇವಿಸಿ. ಇದರಿಂದ ನಿಧಾನವಾಗಿ ಕರುಳು ಚೇತರಿಸಿಕೊಂಡು ಸಹಜ ಸ್ಥಿತಿಗೆ ಬರುತ್ತೀರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ