ಸ್ಟ್ರಾಬೆರಿ ಫೇಸ್ ಪ್ಯಾಕ್ ಮಾಡೋದು ಹೇಗೆ?

ಭಾನುವಾರ, 18 ಫೆಬ್ರವರಿ 2018 (09:21 IST)
ಬೆಂಗಳೂರು: ಸ್ಟ್ರಾಬೆರಿ ಎಂದರೆ ಸೌಂದರ್ಯ, ಬ್ಯೂಟಿ ಎಂದೇ ಜ್ಞಾಪಕಕ್ಕೆ ಬರುತ್ತದೆ. ಮಕ್ಕಳೂ ಇಷ್ಟಪಡುವ ಈ ಹಣ್ಣಿನಿಂದ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ?
 

ಮುಖದಲ್ಲಿ ಕಪ್ಪು ಕಲೆಗಳಿದ್ದರೆ ಸ್ಟ್ರಾಬೆರಿ ಫೇಸ್ ಪ್ಯಾಕ್ ನಿಂದ ಹೋಗಲಾಡಿಸಬಹುದು. ಒಂದು ಬೌಲ್ ಗೆ ಸ್ಟ್ರಾಬೆರಿ ರಸ, ಸ್ವಲ್ಪ ಫ್ರೆಶ್ ಕ್ರೀಂ ಮತ್ತು 1 ಚಮಚ ಜೇನು ತುಪ್ಪ ಸೇರಿಸಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ.

ಸುಮಾರು 20 ನಿಮಿಷಗಳ ನಂತರ ಹದ ಬಿಸಿ ನೀರಿನಲ್ಲಿ ಮುಖ ತೊಳೆದುಕೊಳ್ಳಿ. ಪ್ರತಿ ಎರಡು ದಿನಕ್ಕೊಮ್ಮೆ ಹೀಗೆ ಮಾಡಿಕೊಳ್ಳುವುದರಿಂದ ಮುಖದಲ್ಲಿರುವ ಕಲೆ ಮಾಸುವುದು. ಈ ಮಿಶ್ರಣವನ್ನು ತಯಾರಿಸಿಕೊಂಡು ಗಾಳಿಯಾಡದ ಬಾಕ್ಸ್ ನಲ್ಲಿ ಹಾಕಿಟ್ಟರೆ ಹಲವು ದಿನಗಳವರೆಗೆ ಹಾಳಾಗದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ