ನಾಳೆ ಈದುಲ್ ಫಿತರ್ ಹಬ್ಬ: ಮೇಹೆಂದಿ ಗಾಢ ಬಣ್ಣ ಬರಬೇಕಂದ್ರೆ ಹೀಗೇ ಮಾಡಿ

Sampriya

ಬುಧವಾರ, 10 ಏಪ್ರಿಲ್ 2024 (16:32 IST)
Photo Courtesy Facebook
ಬೆಂಗಳೂರು: ಈದುಲ್-ಫಿತರ್ ಹಬ್ಬವನ್ನು ಪ್ರಪಂಚದಾದ್ಯಂತ ಅತ್ಯಂತ ಭಕ್ತಿ, ನಂಬಿಕೆ ಮತ್ತು ಪ್ರೀತಿಯಿಂದ ಆಚರಿಸಲಾಗುತ್ತದೆ. ಪವಿತ್ರ ರಂಜಾನ್ ತಿಂಗಳು ಮುಗಿಯುತ್ತಿದ್ದಂತೆ, ಮುಸ್ಲಿಂ ಮಹಿಳೆಯರು ಶೃಂಗಾರಗೊಳ್ಳಲು ತಯಾರಿಗಳನ್ನು ಮಾಡಿಕೊಂಡಿರುತ್ತಾರೆ. ಇನ್ನೂ ಈ ಹಬ್ಬಕ್ಕೆ ಪ್ರತಿ ಮಹಿಳೆಯರು ಮೆಹೆಂದಿಯನ್ನು ಹಾಕುತ್ತಾರೆ. ಮೆಹೆಂದಿ ಇಲ್ಲದೆ ಮಹಿಳೆಯರಿಗೆ ಈ ಹಬ್ಬ ಅಪೂರ್ಣ ಅಂತಾನೇ ಹೇಳಬಹುದು.  ಈ ಲೇಖನದಲ್ಲಿ ಕೈಗೆ ಹಾಕಿದ ಮೇಹೆಂದಿ ಗಾಢ ಬಣ್ಣವನ್ನು ಪಡೆಯಲು ಕೆಲ ಟಿಪ್ಸ್‌ ಇಲ್ಲಿವೆ.

ನಿಂಬೆ ಮತ್ತು ಸಕ್ಕರೆ:   ಕೈಗೆಯಿಟ್ಟ ಒಣಗಿದ ಗೋರಂಟಿ ಮೇಲೆ ನಿಂಬೆ ರಸಕ್ಕೆ ಸಕ್ಕರೆಯನ್ನು ಸೇರಿಸಿ ಕೈ ಮೇಲೆ ಚಿಮುಕಿಸಿ. ಇದಿಂದ ನಿಮ್ಮ ಮೆಹೆಂದಿ ಹೆಚ್ಚು ಕಾಲ ನಿಮ್ಮ ಕೈಯಲ್ಲಿ ಉಳಿಯುವುದು ಮಾತ್ರವಲ್ಲದೆ, ಅದು ಬಣ್ಣದಲ್ಲಿಯೂ ಸುಧಾರಿಸುತ್ತದೆ.

ನೀರಿನಿಂದ ಕೈಯನ್ನು ದೂರವಿಡಿ: ಮೆಹೆಂದಿ ಹಾಕಿದ ನಂತರ ನಿಮ್ಮ ಕೈಗಳನ್ನು ನೀರಿನಿಂದ ದೂರವಿಡಿ.  ಕನಿಷ್ಠ 5-6 ಗಂಟೆಗಳ ಕಾಲ ನೀರನ್ನು ಮುಟ್ಟಬೇಡಿ. ಈ ರೀತಿ ಮಾಡುವುದರಿಂದ ಬಣ್ಣ ಹೆಚ್ಚು ಗಾಢವಾಗಿ ಕಾಣಿಸುತ್ತದೆ.

ಸಾಸಿವೆ ಎಣ್ಣೆಯನ್ನು ಬಳಸಿ: ಇನ್ನೂ ಮೆಹೆಂದಿ ಹೆಚ್ಚು ಬಣ್ಣ ಬರಲು ಮೆಹೆಂದಿಯನ್ನು ನೀರಿನಿಂದ ತೆಗೆಯುವುದಕ್ಕಿಂತ ಸಾಸಿವೆ ಎಣ್ಣೆಯಿಂದ ತೆಗೆಯುವುದು ಉತ್ತಮ.

ನಿಮ್ಮ ಕೈಗಳನ್ನು ತೇವಗೊಳಿಸಿ: ಮೆಹೆಂದಿ ಸಂಪೂರ್ಣವಾಗಿ ಒಣಗಿದ ನಂತರ, ನಿಯಮಿತವಾಗಿ ನಿಮ್ಮ ಕೈಗಳನ್ನು ತೇವಗೊಳಿಸಿ. ಇದು ಚರ್ಮವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ