ಗುಲಾಬಿ ಎಸಳಿನಂತಹ ತುಟಿಗಾಗಿ ಹೀಗೆ ಮಾಡಿ ನೋಡಿ

ಶುಕ್ರವಾರ, 24 ಜೂನ್ 2016 (14:18 IST)
ಸುಂದರವಾದ ಗುಲಾಬಿ ಎಸಳಿನಂತಹ ತುಟಿಗಳನ್ನು ಪಡೆಯಬೇಕೆಂಬ ಬಯಕೆ ನಿಮಗೂ ಇದೆಯೇ? ಇಲ್ಲಿದೆ ಕೆಲವು ಅತ್ಯುತ್ತಮ ಸಲಹೆಗಳು. ಒಮ್ಮೆ ಪ್ರಯತ್ನಿಸಿ ನೋಡಿ.  

1. ನಿಂಬೆರಸಮತ್ತು ಗ್ಲಿಸರಿನ್: : ಒಣ ತುಟಿ ಸಮಸ್ಯೆ ಇರುವವರು ನಿಂಬೆ ಹೋಳಿಗೆ ಸ್ವಲ್ಪ ಗ್ಲಿಸರಿನ್ ರಾತ್ರಿ ಮಲಗುವ ವೇಳೆ ನಯವಾಗಿ ಹಚ್ಚಿಕೊಳ್ಳಬೇಕು. ಬೆಳಿಗ್ಗೆದ್ದು ತೊಳೆಯಬೇಕು. ಈ ರೀತಿ ಮಾಡಿದರೆ ತುಟಿಗಳು ಮಾಯಿಶ್ಚರೈಸರ್ ಆಗುತ್ತವೆ.
 
2. ತೆಂಗಿನ ಎಣ್ಣೆ ಅಥವಾ ಹಾಲು:  ತೆಂಗಿನ ಎಣ್ಣೆ ಮತ್ತು ಹಾಲು ನೈಸರ್ಗಿಕ ಲಿಪ್ ಬಾಮ್‌ನಂತೆ ಕೆಲಸ ಮಾಡುತ್ತವೆ. ರಾತ್ರಿ ಮಲಗುವ ತುಟಿಗಳ ಮೇಲೆ ಲೇಪಿಸಿಕೊಳ್ಳಿ. ಇದರಿಂದ ತುಟಿಯ ಒರಟುತನ ಕಳೆದುಹೋಗುತ್ತದೆ. 
 
3. ಸಕ್ಕರೆ ಮತ್ತು ಹಾಲಿನಕೆನೆ: ಸ್ವಲ್ಪ ಹಾಲಿನಕೆನೆಯೊಂದಿಗೆ ಸಕ್ಕರೆಯನ್ನು ಬೆರೆಸಿ ಹಚ್ಚಿಕೊಳ್ಳಿ. ಇದು ನಿರ್ಜೀವತೆಯನ್ನು ನಿವಾರಿಸಿ ತುಟಿಗಳನ್ನು ತೇವವಾಗಿರಿಸುತ್ತದೆ.
 
4.  ಬಾದಾಮಿ ಆಯಿಲ್ : ಕೆಲವರಿಗೆ ತುಟಿ ತುಂಬಾ ಒಡೆಯುತ್ತದೆ, ತುಂಬಾ ಒಣಗುತ್ತದೆ. ಬಾದಾಮಿ ಎಣ್ಣೆಯನ್ನು ಪ್ರತಿದಿನ ಹಚ್ಚುತ್ತಾ ಬಂದರೆ ಮೃದುವಾದ ತುಟಿ ನಿಮ್ಮದಾಗುವುದು. ಮತ್ತು ಹೊಳಪು ಕೂಡ ಹೆಚ್ಚುತ್ತದೆ. 
 
5. ಬೀಟ್‌ರೂಟ್: ಸಹಜವಾದ ಗುಲಾಬಿ ವರ್ಣ ಪಡೆಯಲು ಬೀಟ್‌ರೂಟ್ ಬಳಕೆ ಅತ್ಯುತ್ತಮವಾದ ನೈಸರ್ಗಿಕ ವಿಧಾನವಾಗಿದೆ. ಈ ತರಕಾರಿ ಲೇಪವನ್ನು ಪ್ರತಿನಿತ್ಯ ತುಟಿಗಳಿಗೆ ಹಚ್ಚಿ ಅದರ ಪರಿಣಾಮ ನೋಡಿ. 

ವೆಬ್ದುನಿಯಾವನ್ನು ಓದಿ