ಬೆಳಗಿನ ಜಾವ ಕನಸು ಕಂಡರೆ ನಿಜವಾಗುತ್ತಾ?

ಶುಕ್ರವಾರ, 21 ಡಿಸೆಂಬರ್ 2018 (09:16 IST)
ಬೆಂಗಳೂರು: ಬೆಳಗಿನ ಜಾವ ಕನಸು ಕಂಡರೆ ನಿಜವಾಗುತ್ತದೆ ಎಂಬುದು ಹಿಂದೂ ಪದ್ಧತಿಯ ನಂಬಿಕೆ. ಆದರೆ ಬೆಳಗ್ಗೆ ಯಾವ ಸಮಯದಲ್ಲಿ ಕನಸು ಕಂಡರೆ ಅದು ನಿಜವಾಗುತ್ತದೆ ಗೊತ್ತಾ?


ಬೆಳಗ್ಗಿನ ಬ್ರಾಹ್ಮಿ ಮುಹೂರ್ತದಲ್ಲಿ ಅಂದರೆ 3 ರಿಂದ 6 ಗಂಟೆಯೊಳಗಿನ ಅವಧಿ. ಈ ಅವಧಿಯಲ್ಲಿ ಕಾಣುವ ಕನಸು ನಿಜವಾಗುತ್ತದೆ ಎಂಬ ನಂಬಿಕೆಯಿದೆ.

ಅದೂ ಕೂಡಾ ಪದೇ ಪದೇ ಒಂದೇ ಕನಸು ಈ ಸಮಯದಲ್ಲಿ ಕಾಣುತ್ತಿದ್ದರೆ, ಅದು ನಮ್ಮ ಭವಿಷ್ಯದಲ್ಲಿ ಸಂಭವಿಸಲಿರುವ ಘಟನೆ ಎಂದೇ ಪರಿಗಣಿಸಬೇಕು. ಕೆಲವೊಮ್ಮೆ ಇದು ಕೆಡುಕು ಉಂಟುಮಾಡುವಂತಾಗಿರಬಹುದು, ಇನ್ನು ಕೆಲವೊಮ್ಮೆ ಶುಭವಾಗಿರಬಹುದು. ಆದರೆ ಈ ಮುಹೂರ್ತದಲ್ಲಿ ಬರುವ ಕನಸು ನಮ್ಮ ಭವಿಷ್ಯದ ಕರೆಗಂಟೆ ಎಂದೇ ಪರಿಗಣಿಸಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ