ಶಿವನಿಗೆ ಯಾವುದರಲ್ಲಿ ಅಭಿಷೇಕ ಮಾಡಿದರೆ ಉತ್ತಮ ನೋಡಿ

Krishnaveni K

ಶುಕ್ರವಾರ, 8 ಮಾರ್ಚ್ 2024 (08:40 IST)
ಬೆಂಗಳೂರು: ಇಂದು ಮಹಾಶಿವರಾತ್ರಿ ಹಬ್ಬವನ್ನು ಧಾರ್ಮಿಕ ಶ್ರದ್ಧೆಯಿಂದ ಆಚರಿಸಲಾಗುತ್ತಿದೆ. ಬೆಳಿಗ್ಗೆಯಿಂದ ಹಿಡಿದು ರಾತ್ರಿಯಿಡೀ ಶಿವನಾಮ ಸ್ಮರಣೆ, ಪೂಜೆಯಲ್ಲಿ ತೊಡಗಿಸಿಕೊಳ್ಳುತ್ತೇವೆ.

ಭಗವಾನ್ ಶಿವನನ್ನು ಅಭಿಷೇಕ ಪ್ರಿಯ ಎಂದೂ ಕರೆಯುತ್ತಾರೆ. ಶಿವರಾತ್ರಿ ದಿನ ಉಪವಾಸವಿದ್ದು, ಶಿವಲಿಂಗಕ್ಕೆ ಅಭಿಷೇಕ ಮಾಡಿ ಪೂಜೆ ಮಾಡಿದರೆ ನಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಎಂಬ ನಂಬಿಕೆಯಿದೆ. ಶಿವನಿಗೆ ಯಾವುದೇ ಪೂಜೆ ಮಾಡಿದರೂ ಅಭಿಷೇಕ ಮಾಡಿದಾಗ ಮಾತ್ರ ಸಂತೃಪ್ತನಾಗುತ್ತಾನೆ.

ಹಾಗಿದ್ದರೆ ಶಿವನಿಗೆ ಯಾವುದರಲ್ಲಿ ಅಭಿಷೇಕ ಮಾಡಿದರೆ ಪ್ರಸನ್ನನಾಗುತ್ತಾನೆ? ಉತ್ತಮ ಆರೋಗ್ಯ, ಆಯುಷ್ಯ ವೃದ್ದಿ, ವಿದ್ಯಾಭ್ಯಾಸದಲ್ಲಿ ಪ್ರಗತಿಗಾಗಿ ಭಕ್ತಿಯಿಂದ ಶುದ್ಧ ನೀರಿನಿಂದ ಅಭಿಷೇಕ ಮಾಡಿದರೂ ಸಾಕು. ನೀರಿನಿಂದ ಅಭಿಷೇಕ ಮಾಡುವುದೆಂದರೆ ಶಿವನಿಗೆ ಬಹಳ ಪ್ರಿಯ ಎನ್ನಲಾಗುತ್ತದೆ.

ಕೆಲವೊಂದು ಕಡೆ ಶಿವಲಿಂಗಕ್ಕೆ ಸದಾ ನೀರು ಬೀಳುವುದನ್ನು ನಾವು ನೋಡಿರಬಹುದು. ನೀರಿನ ಹೊರತಾಗಿ ಎಳೆ ನೀರಿನ ಅಭಿಷೇಕ ಇಲ್ಲವೇ ಹಾಲು, ತುಪ್ಪ, ಜೇನು ತುಪ್ಪದಿಂದ ಅಭಿಷೇಕ ಮಾಡಬಹುದು. ಶಿವರಾತ್ರಿ ದಿನ ವಿಶೇಷವಾಗಿ ಈ ರೀತಿ ಭಕ್ತರು ಅಭಿಷೇಕ ಮಾಡುತ್ತಾರೆ. ಇದರಿಂದ ಶಿವನು ಪ್ರಸನನ್ನಾಗುತ್ತಾನೆ ಎಂಬ ನಂಬಿಕೆ ನಮ್ಮದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ