ಸುಶಾಂತ್ ಸಿಂಗ್ ತಂದೆಯ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ

ಭಾನುವಾರ, 5 ಜುಲೈ 2020 (09:48 IST)
ಮುಂಬೈ: ಇತ್ತೀಚೆಗಷ್ಟೇ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ತಂದೆಯ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಸೃಷ್ಟಿಸಿರುವ ಬಗ್ಗೆ ಅವರ ಕುಟುಂಬ ವರ್ಗ ಎಚ್ಚರಿಕೆ ನೀಡಿದೆ.


ಸುಶಾಂತ್ ತಂದೆ ಕೆಕೆ ಸಿಂಗ್ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ ಕಿಡಿಗೇಡಿಗಳು ಅವರ ಹೆಸರಿನಲ್ಲಿ ಸುಶಾಂತ್ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಸುಶಾಂತ್ ಕುಟುಂಬ ವರ್ಗ ಆ ಖಾತೆಯಿಂದ ಬರುವ ಸಂದೇಶವನ್ನು ಯಾರೂ ಅಧಿಕೃತವೆಂದು ಪರಿಗಾಣಿಸಬಾರದೆಂದು ಮನವಿ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ