ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದವರಿಗೆ 14 ದಿನ ಕ್ವಾರಂಟೈನ್ ಕಡ್ಡಾಯ

ಬುಧವಾರ, 25 ಆಗಸ್ಟ್ 2021 (09:18 IST)
ನವದೆಹಲಿ : ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದವರಿಗೆ ಕನಿಷ್ಠ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ವಾಗಿ ಜಾರಿಗೊಳಿಸಿ ಕೇಂದ್ರ ಆರೋಗ್ಯ ಸಚಿವಾಲಯ ಆದೇಶಿಸಿದೆ.

ಅಫ್ಘಾನಿಸ್ತಾನದಿಂದ ಭಾರತಕ್ಕೆ ಜನರನ್ನು ತುರ್ತು ಸ್ಥಳಾಂತರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಹಾಗೂ ಕಾಬೂಲ್ ದೇಶದಿಂದ ಸ್ಥಳಾಂತರಗೊಂಡ ಜನರಿಗೆ ಕಡ್ಡಾಯ ಪೂರ್ವ ಬೋರ್ಡಿಂಗ್ ಆರ್ ಟಿ-ಪಿಸಿಟಿಆರ್ ಪರೀಕ್ಷೆಯಿಂದ (ಪ್ರಸ್ತುತ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯಗೊಳಿಸಲಾಗಿದೆ) ವಿನಾಯಿತಿ ನೀಡಲು ಈಗಾಗಲೇ ಅನುಮತಿ ನೀಡಿದೆ ಎಂದು ಸಚಿವಾಲಯ ಹೇಳಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯವು ಪ್ರಯಾಣಿಕರ ಮ್ಯಾನಿಫೆಸ್ಟ್ ಜೊತೆಗೆ ಈ ಒಳಬರುವ ವಿಮಾನಗಳ ನಿಖರ ದಿನಾಂಕ ಮತ್ತು ಸಮಯದ ಬಗ್ಗೆ ಐಟಿಬಿಪಿಗೆ ಸಾಕಷ್ಟು ಮುಂಚಿತವಾಗಿ ತಿಳಿಸುತ್ತವೆ. ಸದರಿ ಮಾಹಿತಿಯನ್ನು ದೆಹಲಿ ಎನ್ ಸಿಟಿ ಸರ್ಕಾರಕ್ಕೂ ಒದಗಿಸಬಹುದು' ಎಂದು ಅದು ಹೇಳಿದೆ.
ವಿಮಾನ ನಿಲ್ದಾಣದಿಂದ ನಜಾಫ್ ಘರ್ ನ ಚಾವ್ಲಾ ಶಿಬಿರಕ್ಕೆ ಪ್ರಯಾಣಿಕರನ್ನು ಸಾಗಿಸಲು ಐಟಿಬಿಪಿ ಅಗತ್ಯ ವ್ಯವಸ್ಥೆ ಮಾಡುತ್ತದೆ. ಪರೀಕ್ಷೆ ವೇಳೆ ಪಾಸಿಟಿವ್ ತಗುಲಿರುವುದು ಧೃಡವಾದರೆ ಕೋವಿಡ್ ಕೇರ್ ಸೆಂಟರ್ ಅಥವಾ ದೆಹಲಿಯ ಎನ್ ಸಿಟಿಯ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಬೇಕು ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ