ಅಫ್ಘಾನಿಸ್ತಾನದಲ್ಲಿ ಕನ್ನಡಿಗರ ಪ್ರಾಣಹಾನಿ ಬಗ್ಗೆ ಮಾಹಿತಿ ಇಲ್ಲ: ಬೊಮ್ಮಾಯಿ
ಸೋಮವಾರ, 23 ಆಗಸ್ಟ್ 2021 (14:20 IST)
ಬೆಂಗಳೂರು: ಅಫ್ಘಾನಿಸ್ತಾನದಲ್ಲಿ ಎಷ್ಟು ಜನ ಕನ್ನಡಿಗರು ಸಿಲುಕಿದ್ದಾರೆಂಬ ನಿಖರ ಮಾಹಿತಿಯಾಗಲೀ, ಕನ್ನಡಿಗರಿಗೆ ಪ್ರಾಣಹಾನಿ ಆಗಿರುವ ಬಗ್ಗೆಯಾಗಲೀ ಸರ್ಕಾರಕ್ಕೆ ಇನ್ನೂ ಯಾವುದೆ ಮಾಹಿತಿಯಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಭಾರತದ ರಾಯಭಾರಿ ಕಚೇರಿ ಜೊತೆ ಕರ್ನಾಟಕ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ಈಗಾಗಲೇ ಅಫ್ಘಾನ್ ನಲ್ಲಿರುವ ಕನ್ನಡಿಗರ ರಕ್ಷಣೆ ಮತ್ತು ತಾಯ್ನಾಡಿಗೆ ಕರೆ ತರಲು ಸರ್ಕಾರ ಮಾಹಿತಿ ಕಲೆ ಹಾಕುತ್ತಿದೆ. ವಿವಿದೆಡೆ ಸಿಲುಕಿರುವ ಕನ್ನಡಿಗರನ್ನು ಪತ್ತೆ ಹಚ್ಚಿ ಕರೆತರಲಾಗುತ್ತದೆ. ಅಫ್ಘನ್ ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಅಲ್ಲಿ ಎಷ್ಟು ಜನ ಕನ್ನಡಿಗರು ಸಿಲುಕಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.
ಈಗಾಗಲೇ ಕೆಲವು ಕನ್ನಡಿಗರನ್ನು ಅಫ್ಘಾನ್ ನಿಂದ ಕರೆತರಲಾಗಿದೆ. ಆ ದೇಶದಲ್ಲಿರುವ ಕನ್ನಡಿಗರ ಸಂಪರ್ಕ ಮಾಡಲಾಗುತ್ತಿದೆ. ಎಷ್ಟು ಜನ ಕನ್ನಡಿಗರಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಕನ್ನಡಿಗರಿಗೆ ಪ್ರಾಣಹಾನಿ ಆಗಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದರು.
ಅಫ್ಘನ್ ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಅಲ್ಲಿ ಎಷ್ಟು ಜನ ಕನ್ನಡಿಗರು ಸಿಲುಕಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ದೂರದಲ್ಲಿರುವ ಕನ್ನಡಿಗರ ರಕ್ಷಣೆಗಾಗಿ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ. ವಿವಿದೆಡೆ ಸಿಲುಕಿರುವ ಕನ್ನಡಿಗರನ್ನು ಪತ್ತೆ ಹಚ್ಚಿ ಕರೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.