ಬೆಂಗಳೂರು : ಪೌರ ಕಾರ್ಮಿಕರಿಗೆ ಕೊರೊನಾ ಶಾಕ್. ಬೆಂಗಳೂರಿನಲ್ಲಿ 19 ಪೌರ ಕಾರ್ಮಿಕರಿಗೆ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ.
ಹೌದು. ಬೆಂಗಳೂರಿನಲ್ಲಿ ಸ್ವಚ್ಚತೆಯ ವಾರಿಯರ್ ಗಳಿಗೂ ಸೋಂಕು ತಗುಲಿದೆ. 94ರ ಪೈಕಿ 19 ಪೌರ ಕಾರ್ಮಿಕರಿಗೆ ಪಾಸಿಟಿವ್ ಬಂದಿದ್ದು , ಆ 19 ಜನರಲ್ಲಿ 7 ಮಂದಿ ಪಾದರಾಯನಪುರ ವಾಸಿಗಳು ಎನ್ನಲಾಗಿದೆ . ಸೋಂಕಿತ ಪಾದರಾಯನಪುರದ ನಿವಾಸಿಗಳನ್ನು ಹಜ್ ಭವನಕ್ಕೆ ಶಿಫ್ಟ್ ಮಾಡಲಾಗಿದೆ. ಹಾಗೂ ಉಳಿದವರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.