ಆಗಸ್ಟ್ ವರೆಗೆ ಶಾಲೆಗೆ ಮಕ್ಕಳನ್ನು ಕಳುಹಿಸಲೇಬೇಡಿ!

ಶನಿವಾರ, 9 ಮೇ 2020 (08:32 IST)
ಬೆಂಗಳೂರು: ಕೊರೋನಾವೈರಸ್ ಎಂಬ ಮಹಾಮಾರಿಗೆ ವಿಶ್ವವೇ ನಲುಗಿ ಹೋಗಿದೆ. ಜಗತ್ತಿನ ಎಲ್ಲಾ ವ್ಯವಹಾರಗಳೂ ಸ್ತಬ್ಧವಾಗಿದೆ. ಹೀಗಿರುವಾಗ ಹೊಸ ವರ್ಷದ ಆರಂಭದ ನಿರೀಕ್ಷೆಯಲ್ಲಿರುವ ಶಾಲೆಗಳು ತರಗತಿಗಳ ಪುನರಾರಂಭಕ್ಕೆ ಸರ್ಕಾರದ ಆದೇಶವನ್ನು ಎದುರು ನೋಡುತ್ತಿದೆ.



ಶಾಲೆ ಯಾವಾಗ ತೆರೆಯಬೇಕು ಎಂಬ ಬಗ್ಗೆ ಸರ್ಕಾರದಿಂದ ಇನ್ನೂ ಆದೇಶ ಬಂದಿಲ್ಲ. ಕೆಲವೊಂದು ಶಾಲೆಗಳು ಜುಲೈನಲ್ಲಿ ತರಗತಿ ಆರಂಭಿಸಬಹುದು ಎಂಬ ನಿರೀಕ್ಷೆಯಲ್ಲಿದೆ.

ಹಾಗಿದ್ದರೂ ನಿಮ್ಮ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಆಗಸ್ಟ್ ವರೆಗೂ ಶಾಲೆಗೆ ಕಳುಹಿಸದೇ ಇರುವುದೇ ಉತ್ತಮ. ಆ ಬಳಿಕವೂ ಶಾಲೆಗೆ ಕಳುಹಿಸುವಾಗ ತಪ್ಪದೇ ಮಾಸ್ಕ್, ಸ್ಯಾನಿಟೈಸರ್ ಸಮೇತವೇ ಕಳುಹಿಸಿ. ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಕ್ಕಳಿಗೂ ತಿಳಿ ಹೇಳಿ. ಯಾಕೆಂದರೆ ನಿಮ್ಮ ಮಕ್ಕಳ ಆರೋಗ್ಯ ನಿಮ್ಮ ಕೈಯಲ್ಲೇ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ