ಟೀಂ ಇಂಡಿಯಾ ಆಯ್ಕೆ ಸಮಿತಿಗೆ ಅಜಿತ್ ಅಗರ್ಕರ್ ಮುಖ್ಯಸ್ಥ

ಬುಧವಾರ, 5 ಜುಲೈ 2023 (08:50 IST)
ಮುಂಬೈ: ಟೀಂ ಇಂಡಿಯಾ ಆಯ್ಕೆ ಸಮಿತಿಗೆ ನೂತನ ಮುಖ್ಯಸ್ಥರಾಗಿ ಮಾಜಿ ವೇಗಿ ಅಜಿತ್ ಅಂಗರ್ಕರ್ ಆಯ್ಕೆಯಾಗಿದ್ದಾರೆ.

ಅಜಿತ್ ಆಯ್ಕೆಯಾಗಿರುವ ಬಗ್ಗೆ ಬಿಸಿಸಿಐ ಅಧಿಕೃತ ಪ್ರಕಟಣೆ ನೀಡಿದೆ. ಜುಲೈ 5 ರಿಂದಲೇ ಅಜಿತ್ ಅಗರ್ಕರ್ ಮುಖ್ಯಸ್ಥರಾಗಿರುವ ನೂತನ ಸಮಿತಿಯ ಅಧಿಕಾರಾವಧಿ ಆರಂಭವಾಗಿದೆ.

ಖಾಸಗಿ ವಾಹಿನಿಯೊಂದು ನಡೆಸಿದ್ದ ಕುಟುಕು ಕಾರ್ಯಾಚರಣೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ಚೇತನ್ ಶರ್ಮಾರನ್ನು ಮುಖ್ಯ ಆಯ್ಕೆಗಾರ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಅವರಿಂದ ತೆರವಾದ ಸ್ಥಾನಕ್ಕೆ ಅಜಿತ್ ಅಗರ್ಕರ್ ಅವರನ್ನು ನೇಮಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ