ಅಂತೂ ಭಾರತ ತಂಡ ಪ್ರವೇಶಿಸಿಯೇ ಬಿಟ್ಟ ಮರಿ ತೆಂಡುಲ್ಕರ್
ತೆಂಡುಲ್ಕರ್ ಪುತ್ರ ಭಾರತ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ. ಶ್ರೀಲಂಕಾ ವಿರುದ್ಧ ಜುಲೈನಲ್ಲಿ ಭಾರತ ತಂಡ ಎರಡು ನಾಲ್ಕು ದಿನಗಳ ಪಂದ್ಯ ಮತ್ತು 5 ಏಕದಿನ ಪಂದ್ಯವಾಡಲಿದೆ. ಈ ತಂಡಕ್ಕೆ ಅರ್ಜುನ್ ಆಯ್ಕೆಯಾಗಿದ್ದಾರೆ.
18 ವರ್ಷದ ಎಡಗೈ ಬ್ಯಾಟ್ಸ್ ಮನ್ ಮತ್ತು ಮಧ್ಯಮ ವೇಗಿ ಕೂಡಾ. ಈ ಹಿಂದೆ ಹಲವು ಕ್ಲಬ್ ಲೆವೆಲ್ ಟೂರ್ನಿಗಳಲ್ಲಿ, ಮುಂಬೈ ಕಿರಿಯರ ತಂಡದಲ್ಲಿ ಅರ್ಜುನ್ ಗಮನಾರ್ಹ ಪ್ರದರ್ಶನ ನೀಡಿದ್ದರು. ಅಷ್ಟೇ ಅಲ್ಲದೆ, ಅವಕಾಶ ಸಿಕ್ಕಾಗಲೆಲ್ಲಾ ಅಂತಾರಾಷ್ಟ್ರೀಯ ಬ್ಯಾಟ್ಸ್ ಮನ್ ಗಳಿಗೆ ನೆಟ್ ಬೌಲರ್ ಆಗಿಯೂ ಅನುಭವ ಪಡೆದಿದ್ದಾರೆ. ಅಂತೂ ಅಪ್ಪನ ಹಾದಿಯಲ್ಲೇ ಪುತ್ರನೂ ಸಾಗಿದಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.