ಏಷ್ಯಾ ಕಪ್ ಕ್ರಿಕೆಟ್: ಭಾರತ-ಪಾಕಿಸ್ತಾನ ನಡುವೆ ಇಂದು ‘ಸೂಪರ್’ ಪಂದ್ಯ

ಭಾನುವಾರ, 10 ಸೆಪ್ಟಂಬರ್ 2023 (09:00 IST)
ಕೊಲೊಂಬೋ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಸೂಪರ್ ಫೋರ್ ಪಂದ್ಯ ನಡೆಯಲಿದೆ.

ಲೀಗ್ ಹಂತದಲ್ಲಿ ಎರಡೂ ತಂಡಗಳೂ ಮುಖಾಮುಖಿಯಾಗಿದ್ದರೂ ಮಳೆಯಿಂದಾಗಿ ಎರಡನೇ ಸರದಿಯ ಆಟ ನಡೆದಿರಲಿಲ್ಲ. ಇಂದಿನ ಪಂದ್ಯಕ್ಕೂ ಮಳೆ ಭೀತಿಯಿದೆ. ಆದರೆ ಮಳೆ ಕೊಂಚ ಬಿಡುವು ನೀಡಿ ಪಂದ್ಯ ನಡೆಯುವಂತಾಗಲಿ ಎಂಬುದು ಅಭಿಮಾನಿಗಳ ಹಾರೈಕೆ.

ಕಳೆದ ಬಾರಿ ಎರಡೂ ತಂಡಗಳೂ ಮುಖಾಮುಖಿಯಾಗಿದ್ದಾಗ ಭಾರತದ ಬ್ಯಾಟಿಂಗ್ ಕೈಕೊಟ್ಟಿತ್ತು. ಪಾಕ್ ವಿರುದ್ಧ ಗೆಲ್ಲಬೇಕಾದರೆ ಟೀಂ ಇಂಡಿಯಾ ಅಗ್ರ ಕ್ರಮಾಂಕ ಸಿಡಿಯಬೇಕು. ಪಾಕ್ ಖಡಕ್ ವೇಗಿಗಳ ಮುಂದೆ ರೋಹಿತ್, ಕೊಹ್ಲಿ, ಗಿಲ್ ಸಿಡಿದರೆ ಭಾರತದ ಹಾದಿ ಸುಗಮವಾಗಲಿದೆ.

ಇಷ್ಟಕ್ಕೇ ನಿಲ್ಲುವುದಿಲ್ಲ. ಬೌಲಿಂಗ್ ನಲ್ಲೂ ಭಾರತ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಬೇಕಿದೆ. ನಾಯಕ ಬಾಬರ್ ಅಜಮ್, ಫಕಾರ್ ಜಮಾನ್, ಇಫ್ತಿಕಾರ್ ಅಹಮ್ಮದ್ ಮುಂತಾದ ಪ್ರತಿಭಾವಂತರ ಬ್ಯಾಟಿಂಗ್ ಪಡೆ ಪಾಕ್ ಬಳಿಯಿದೆ. ಟೀಂ ಇಂಡಿಯಾಕ್ಕೆ ಜಸ್ಪ್ರೀತ್ ಬುಮ್ರಾ ಕಮ್ ಬ್ಯಾಕ್ ಮಾಡಿರುವುದು ಬಲ ಬಂದಂತಾಗಿದೆ. ಸ್ಪಿನ್ನರ್ ಗಳೂ ನಿರ್ಣಾಯಕವಾಗುತ್ತಿದ್ದು, ರವೀಂದ್ರ ಜಡೇಜಾ, ಕುಲದೀಪ್ ಯಾದವ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಪಂದ್ಯ ಅಪರಾಹ್ನ 3 ಗಂಟೆಗೆ ನಡೆಯುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ