ಮೊದಲ ಏಕದಿನ ಪಂದ್ಯದಲ್ಲೂ ವಿಕೆಟ್ ನಷ್ಟವಿಲ್ಲದೇ 156 ರನ್ ಹೊಡೆದಿದ್ದ ವಾರ್ನರ್-ಫಿಂಚ್ ಜೋಡಿ ಈಗ ಮತ್ತೆ ಅದೇ ಶೋ ಮುಂದುವರಿಸಿದೆ. ಇತ್ತೀಚೆಗಿನ ವರದಿ ಬಂದಾಗ 12 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 77 ರನ್ ಗಳಿಸಿದೆ. ವಾರ್ನರ್ ಆಗಲೇ 41 ಎಸೆತಗಳಲ್ಲಿ 51 ರನ್ ಗಳಿಸಿದ್ದರೆ ಫಿಂಚ್ ಕೊಂಚ ನಿಧಾನಗತಿಯಲ್ಲಿ ಆಡುತ್ತಿದ್ದು 32 ಎಸೆತಗಳಲ್ಲಿ 22 ರನ್ ಗಳಿಸಿದ್ದಾರೆ. ಭಾರತದ ಪರ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಒತ್ತಡ ಹೇರುತ್ತಿದ್ದರೂ ವಿಕೆಟ್ ಕೀಳುವಲ್ಲಿ ವಿಫಲರಾಗಿದ್ದಾರೆ. ಇತ್ತ ನವದೀಪ್ ಸೈನಿಯದ್ದು ಹಳಿ ತಪ್ಪಿದ ಬೌಲಿಂಗ್. ಇದೇ ರೀತಿ ಮುಂದುವರಿದರೆ ಆಸ್ಟ್ರೇಲಿಯಾ ಇಂದು ಕೂಡಾ 350 ಪ್ಲಸ್ ರನ್ ಗಳಿಸುವುದು ಪಕ್ಕಾ.