ಶುಬ್ಮನ್ ಗಿಲ್ ರಿಂದ ನಂ.1 ಪಟ್ಟ ಕಸಿದುಕೊಂಡ ಪಾಕ್ ಕ್ರಿಕೆಟಿಗ ಬಾಬರ್ ಅಜಮ್
ಗುರುವಾರ, 21 ಡಿಸೆಂಬರ್ 2023 (09:00 IST)
Photo Courtesy: Twitter
ದುಬೈ: ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್ ನಲ್ಲಿ ನಂ.1 ಬ್ಯಾಟರ್ ಆಗಿ ಹೊರಹೊಮ್ಮಿದ್ದ ಭಾರತದ ಶುಬ್ಮನ್ ಗಿಲ್ ಈಗ ಆ ಪಟ್ಟವನ್ನು ಮತ್ತೆ ಪಾಕ್ ಕ್ರಿಕೆಟಿಗ ಬಾಬರ್ ಅಜಮ್ ಗೆ ಬಿಟ್ಟುಕೊಟ್ಟಿದ್ದಾರೆ.
ಐಸಿಸಿ ಲೇಟೆಸ್ಟ್ ಏಕದಿನ ಶ್ರೇಯಾಂಕದಲ್ಲಿ ಶುಬ್ಮನ್ ಗಿಲ್ ನಂ.1 ಸ್ಥಾನದಲ್ಲಿದ್ದರು. ಆದರೆ ಅದೀಗ ಬಾಬರ್ ಪಾಲಾಗಿದೆ. ಇದಕ್ಕೆ ಮೊದಲು ಬಾಬರ್ ನಂ.1 ಸ್ಥಾನದಲ್ಲಿದ್ದರು.
2023 ಏಕದಿನ ವಿಶ್ವಕಪ್ ಬಳಿಕ ಶುಬ್ಮನ್ ಗಿಲ್ ಯಾವುದೇ ಏಕದಿನ ಪಂದ್ಯವಾಡಿಲ್ಲ. ಹೀಗಾಗಿ ಅವರ ನಂ.1 ಸ್ಥಾನಕ್ಕೆ ಕುತ್ತು ಬಂದಿದೆ. 824 ಅಂಕ ಪಡದಿರುವ ಬಾಬರ್ ನಂ.1 ಸ್ಥಾನದಲ್ಲಿದ್ದರೆ, ಗಿಲ್ 810 ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ.
ಹಾಗಿದ್ದರೂ ಬ್ಯಾಟಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ಆಟಗಾರರೇ ಪಾರುಪತ್ಯ ಹೊಂದಿದ್ದಾರೆ. ವಿರಾಟ್ ಕೊಹ್ಲಿ 3, ರೋಹಿತ್ ಶರ್ಮಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ಬೌಲರ್ ಗಳ ಪಟ್ಟಿಯಲ್ಲಿ ದ.ಆಫ್ರಿಕಾದ ಕೇಶವ್ ಮಹಾರಾಜ್ ನಂ.1 ಸ್ಥಾನದಲ್ಲಿದ್ದಾರೆ. ಭಾರತದ ಮೊಹಮ್ಮದ್ ಸಿರಾಜ್ 3,ಜಸ್ಪ್ರೀತ್ ಬುಮ್ರಾ 5, ಕುಲದೀಪ್ ಯಾದವ್ 8 ನೇ ಸ್ಥಾನದಲ್ಲಿದ್ದಾರೆ. ಆಲ್ ರೌಂಡರ್ ಗಳ ಪಟ್ಟಿಯಲ್ಲಿ ಭಾರತದ ಯಾವುದೇ ಆಟಗಾರ ಸ್ಥಾನ ಪಡೆದಿಲ್ಲ. ಆದರೆ ತಂಡದ ವಿಚಾರಕ್ಕೆ ಬರುವುದಾದರೆ ಟೀಂ ಇಂಡಿಯಾವೇ ನಂ.1 ಸ್ಥಾನದಲ್ಲಿದೆ.