ಭಾರತ-ಕಿವೀಸ್ ಏಕದಿನ: ಶಿಖರ್ ಧವನ್, ಶುಬ್ನಂ ಗಿಲ್ ಶತಕದ ಜೊತೆಯಾಟ

ಶುಕ್ರವಾರ, 25 ನವೆಂಬರ್ 2022 (08:40 IST)
ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಆರಂಭ ಪಡೆದಿದೆ.
 

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾಗೆ ನಾಯಕ ಶಿಖರ್ ಧವನ್, ಶುಬ್ನಂ ಗಿಲ್ ಉತ್ತಮ ಆರಂಭ ನೀಡಿದರು. ಧವನ್ 77 ಎಸೆತಗಳಿಂದ 72, ಶುಬ್ನಂ ಗಿಲ್ 65 ಎಸೆತಗಳಿಂದ 50 ರನ್ ಗಳಿಸಿದರು. ಇವರಿಬ್ಬರೂ ಮೊದಲ ವಿಕೆಟ್ ಗೆ 124 ರನ್ ಗಳ ಜೊತೆಯಾಟವಾಡಿದರು.

ಇದೀಗ 27 ಓವರ್ ಗಳ ಆಟವಾಗಿದ್ದು 2 ವಿಕೆಟ್ ನಷ್ಟಕ್ಕೆ 140 ರನ್ ಗಳಾಗಿವೆ.  ಶ್ರೇಯಸ್ ಅಯ್ಯರ್ ಅಜೇಯ 10, ರಿಷಬ್ ಪಂತ್ ಅಜೇಯ 6 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ