ಬಾರ್ಡರ್-ಗವಾಸ್ಕರ್ ಟೆಸ್ಟ್: ಉಸ್ಮಾನ್ ಖವಾಜ ಶತಕ, ತಿಣುಕಾಡಿದ ಬೌಲರ್ ಗಳು
ಉಸ್ಮಾನ್ ಖವಾಜ ಶತಕ ಸಿಡಿಸಿದ್ದು 104 ರನ್ ಗಳೊಂದಿಗೆ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕ್ಯಾಮರೂನ್ ಗ್ರೀನ್ 49 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇದಕ್ಕೆ ಮೊದಲು ಟ್ರಾವಿಸ್ ಹೆಡ್ 32, ಲಬುಶೇನ್ 3, ಸ್ಟೀವ್ ಸ್ಮಿತ್ 38, ಪೀಟರ್ ಹ್ಯಾಂಡ್ಸ್ ಕೋಂಬ್ 17 ರನ್ ಗಳಿಸಿ ಔಟಾಗಿದ್ದಾರೆ.
ಭಾರತೀಯ ಬೌಲರ್ ಗಳು ದಿನವಿಡೀ ವಿಕೆಟ್ ಗಾಗಿ ಬೆವರಿಳಿಸಿದರು. ರವಿಚಂದ್ರನ್ ಅಶ್ವಿನ್ ಮೊದಲ ವಿಕೆಟ್ ಪಡೆದರೆ ಬಳಿಕ ಮೊಹಮ್ಮದ್ ಶಮಿ 2, ರವೀಂದ್ರ ಜಡೇಜಾ 1 ವಿಕೆಟ್ ಕಬಳಿಸಿದರು. ಅಕ್ಸರ್ ಪಟೇಲ್, ಉಮೇಶ್ ಯಾದವ್ ಇನ್ನೂ ಯಶಸ್ವಿಯಾಗಿಲ್ಲ.