ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ಜಿಂಬಾಬ್ವೆ ಎರಡನೇ ಓವರಿನಲ್ಲಿ ಬರೀಂದರ್ ಸ್ರಾನ್ ಎಸೆತಕ್ಕೆ ಪೀಟರ್ ಮೂರ್ ಎಲ್‌ಬಿಡಬ್ಲ್ಯುಗೆ ಬಲಿಯಾದರು. ಕುಲಕರ್ಣಿ ಅವರ ಎಸೆತಕ್ಕೆ ಮಸಾಕಾಡ್ಜಾ ವಿಕೆಟ್ ಹಿಂದೆ ಧೋನಿಗೆ ಕ್ಯಾಚಿತ್ತು ಔಟಾದರು. ವೇಗಿ ಜಸ್‌ಪ್ರೀತ್ ಬುಮ್ರಾ ಅವರು ಚಿಬಾಬಾ ಅವರನ್ನು ಬೌಲ್ಡ್ ಔಟ್ ಮಾಡಿದರು. ಬುಮ್ರಾ ತಮ್ಮ ಮೊನಚಾದ ಬೌಲಿಂಗ್ ಮೂಲಕ ಸಿಂಬಾಂಡಾ ಅವರನ್ನು ಔಟ್ ಮಾಡಿದರು. ಸಿಂಬಾಂಡಾ ಧೋನಿಗೆ ಕ್ಯಾಚಿತ್ತು ಔಟಾದರು.
ಜಿಂಬಾಬ್ವೆ ಪರ ಚಿಗುಂಬರಾ ಮಾತ್ರ 41 ರನ್ ಸ್ಕೋರ್ ಮಾಡಿದರು. ಚಿಗುಂಬರಾ ಕೂಡ ಬುಮ್ರಾ ಎಸೆತಕ್ಕೆ ಬೌಲ್ಡ್ ಆದರು. ಬರೀಂದರ್ ಸ್ರಾನ್ ಮತ್ತು ಧವಲ್ ಕುಲಕರ್ಣಿ ತಲಾ 2 ವಿಕೆಟ್ ಕಬಳಿಸಿದರು. ಅಕ್ಸರ್ ಪಟೇಲ್ ಮತ್ತು ಚಾಹಲ್ ತಲಾ ಒಂದು ವಿಕೆಟ್ ಕಬಳಿಸಿದರು. ಮೈದಾನವು ಸ್ಪಿನ್‌ಗೆ ಹೆಚ್ಚು ತಿರುಗದಿದ್ದರಿಂದ ಅಕ್ಸರಪ್ ಪಟೇಲ್ ಮತ್ತು ಐಪಿಎಲ್‌ನಲ್ಲಿ ಮಿಂಚಿದ್ದ ಚಾಹಲ್ ಒಂದು ವಿಕೆಟ್ ಮಾತ್ರ ಗಳಿಸಲು ಸಾಧ್ಯವಾಯಿತು. ಭಾರತದ ಪರ ಹಿರಿಯ ಆಟಗಾರರು ವಿಶ್ರಾಂತಿ ತೆಗೆದುಕೊಂಡಿದ್ದರಿಂದ ಬಹುತೇಕ ಹೊಸಬರನ್ನೇ ತಂಡಕ್ಕೆ ಆಯ್ಕೆ ಮಾಡಿತ್ತು. ಜಿಂಬಾಬ್ವೆ ಒಂದರ ಹಿಂದೊಂದು ವಿಕೆಟ್ ಕಳೆದುಕೊಂಡು ಬ್ಯಾಟ್ಸ್‌ಮನ್ ಪೆವಿಲಿಯನ್ ಹಾದಿ ಹಿಡಿದರು. ಒಂದು ಹಂತದಲ್ಲಿ ಜಿಂಬಾಬ್ವೆ 77ಕ್ಕೆ 5 ವಿಕೆಟ್ ಕಳೆದುಕೊಂಡಿತ್ತು.