ಮೆಂಟರ್ ಧೋನಿ ಬಗ್ಗೆ ಕೋಚ್ ರವಿಶಾಸ್ತ್ರಿ ಹೇಳಿಕೆ

ಶುಕ್ರವಾರ, 10 ಸೆಪ್ಟಂಬರ್ 2021 (10:04 IST)
ಲಂಡನ್: ಟಿ20 ವಿಶ್ವಕಪ್ ಕ್ರಿಕೆಟ್ ಗೆ ಆರಿಸಲಾದ ಟೀಂ ಇಂಡಿಯಾಗೆ ಮೆಂಟರ್ ಆಗಿ ಆಯ್ಕೆಯಾದ ಮಾಜಿ ನಾಯಕ ಧೋನಿ ಬಗ್ಗೆ ಕೋಚ್ ರವಿಶಾಸ್ತ್ರಿ ಹೇಳಿಕೆ ನೀಡಿದ್ದಾರೆ.


ಕೋಚ್ ರವಿಶಾಸ್ತ್ರಿ ಜೊತೆಗೆ ಧೋನಿ ಕೂಡಾ ಆಟಗಾರರಿಗೆ ಸಲಹೆ ನೀಡಲಿದ್ದಾರೆ. ಇದೀಗ ರವಿಶಾಸ್ತ್ರಿ ಧೋನಿ ಆಯ್ಕೆ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

‘ತಂಡಕ್ಕೆ ಇದಕ್ಕಿಂತ ದೊಡ್ಡ ಅದೃಷ್ಟ ಇನ್ನೊಂದಿಲ್ಲ. ಬಿಸಿಸಿಐ ಸರಿಯಾಗಿ ಯೋಚಿಸಿ ಒಳ್ಳೆಯ ನಿರ್ಧಾರ ಕೈಗೊಂಡಿದೆ. ಧೋನಿ ಡ್ರೆಸ್ಸಿಂಗ್ ರೂಂ, ಡಗ್ ಔಟ್ ನಲ್ಲಿ ಕೂತಿದ್ದರೆ ಆಟಗಾರರಲ್ಲಿರುವ ಉತ್ಸಾಹವೇ ಬೇರೆ ಲೆವೆಲ್ ನಲ್ಲಿರುತ್ತದೆ. ಇದು ನಿಜಕ್ಕೂ ಗ್ರೇಟ್’ ಎಂದಿದ್ದಾರೆ ರವಿಶಾಸ್ತ್ರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ