ಐಪಿಎಲ್ 2024: ಆರ್ ಸಿಬಿ ಹೊರಹಾಕಲು ಸಿಎಸ್ ಕೆ ವಿರುದ್ಧ ಸೋತಿತೇ ರಾಜಸ್ಥಾನ್ ರಾಯಲ್ಸ್
ರಾಜಸ್ಥಾನ್ ರಾಯಲ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿದ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಚೆನ್ನೈ 18.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಗೆಲುವು ಕಂಡಿತು. ಇಷ್ಟು ದಿನ ಎಲ್ಲಾ ಪಂದ್ಯಗಳಲ್ಲಿ ರಾಜಸ್ಥಾನ್ ಬ್ಯಾಟಿಗರು ಪಿಚ್ ಯಾವುದೇ ಇರಲಿ ಅಬ್ಬರಿಸುತ್ತಿದ್ದರು. ಯಾವ ಪಂದ್ಯವನ್ನೂ ಇಷ್ಟು ಸುಲಭವಾಗಿ ಸೋತಿದ್ದೇ ಇಲ್ಲ.
ಆದರೆ ನಿನ್ನೆಯ ಪಂದ್ಯದಲ್ಲಿ ಕಳಪೆ ಶಾಟ್ ಗಳನ್ನು ಹೊಡೆದು ಒಬ್ಬರಾದ ಮೇಲೊಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಅವರ ಈ ಆಟದಲ್ಲಿ ಗೆಲ್ಲಬೇಕೆಂಬ ಯಾವ ಛಲವೂ ಇರಲಿಲ್ಲ. ಒಂದು ವೇಳೆ ರಾಜಸ್ಥಾನ್ ಇಂದು ಗೆಲ್ಲುತ್ತಿದ್ದರೆ ಆರ್ ಸಿಬಿಗೆ ಪ್ಲೇ ಆಫ್ ಗೇರುವ ಅವಕಾಶ ಹೆಚ್ಚಾಗುತ್ತಿತ್ತು. ಆದರೆ ರಾಜಸ್ಥಾನ್ ಸೋತಿರುವುದರಿಂದ ಆರ್ ಸಿಬಿ ಪ್ಲೇ ಆಫ್ ಇನ್ನಷ್ಟು ಕಠಿಣವಾಗಿದೆ.
ಇದನ್ನು ನೋಡಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ರಾಜಸ್ಥಾನ್ ತಂಡ ಆರ್ ಸಿಬಿಯನ್ನು ಪ್ಲೇ ಆಫ್ ನಿಂದ ಹೊರಗಿಡಲು ಬೇಕೆಂದೇ ಈ ಪಂದ್ಯವನ್ನು ಸೋತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ರಾಜಸ್ಥಾನ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.