ಚಾಂಪಿಯನ್ಸ್‌ ಟ್ರೋಫಿ: ಟಾಸ್‌ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌ ಆಯ್ಕೆ: ಮುಯ್ಯಿ ತೀರಿಸಿಕೊಳ್ಳುವುದೇ ಭಾರತ

Sampriya

ಮಂಗಳವಾರ, 4 ಮಾರ್ಚ್ 2025 (14:16 IST)
Photo Courtesy X
ದುಬೈ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಇಂದು ನಡೆಯುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿವೆ.

ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ,. ರೋಹಿತ್‌ ಶರ್ಮಾ ಪಡೆದ ಮೊದಲು ಫೀಲ್ಡಿಂಗ್‌ ನಡೆಸಲಿದೆ.

ಐಸಿಸಿ ಟೂರ್ನಿಗಳ ಇತಿಹಾಸ ನೋಡಿದಾಗ ಭಾರತ ತಂಡವು ಆಸ್ಟ್ರೇಲಿಯಾ ಎದುರು ನಾಕೌಟ್ ಹಂತದಲ್ಲೇ ಸೋತಿದ್ದು ಜಾಸ್ತಿ. ಭಾರತ ತಂಡವು ಐಸಿಸಿ ಟ್ರೋಫಿ ಟೂರ್ನಿಯ ನಾಕೌಟ್ ಹಂತದಲ್ಲಿ ಆಸ್ಟ್ರೇಲಿಯಾ ತಂಡವನ್ನು 2011ರ ವಿಶ್ವಕಪ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲಿಸಿತ್ತು.

ಉಳಿದಂತೆ 2015ರ ಏಕದಿನ ವಿಶ್ವಕಪ್ ಸೆಮಿಫೈನಲ್‌, 2023ರ ಏಕದಿನ ವಿಶ್ವಕಪ್ ಫೈನಲ್‌ ಹಾಗೂ ಅದೇ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಭಾರತ ಮುಗ್ಗರಿಸಿತ್ತು. ಇದೀಗ ಮುಯ್ಯಿ ತೀರಿಸುವ ಅವಕಾಶ ಭಾರತದ ಮುಂದಿದೆ.

ಎರಡು ತಂಡಗಳು ಉತ್ತಮ ಫಾರ್ಮ್‌ನಲ್ಲಿದ್ದು ಟೂರ್ನಿಯಲ್ಲಿ ಅಜೇಯವಾಗಿ ಸೆಮಿಫೈನಲ್‌ ಪ್ರವೇಶಿಸಿವೆ. ಭಾರತ ತಂಡವು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಸವಾರಿ ಮಾಡಿದೆ. ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್‌ ತಂಡವನ್ನು ಮಣಿಸಿದೆ. ದಕ್ಷಿಣ ಆಫ್ರಿಕಾ ಮತ್ತು ಅಫ್ಗಾನಿಸ್ಥಾನ ವಿರುದ್ಧ ಮಳೆಯಿಂದ ಪಂದ್ಯ ರದ್ದುಗೊಂಡಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ