Champions Trophy Final:ಪಂದ್ಯದ ಮಧ್ಯದಲ್ಲೇ ಟೀಂ ಇಂಡಿಯಾ ಸ್ಟಾರ್ ಆಟಗಾರನಿಂದ ನಿವೃತ್ತಿ ಸುಳಿವು
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಇಂದು ರವೀಂದ್ರ ಜಡೇಜಾ ಅವರ ವರ್ತನೆಯೊಂದು ನಿವೃತ್ತಿಯ ಸುಳಿವು ನೀಡಿದೆ. ಇಂದು 10 ಓವರ್ ಗಳ ಕೋಟಾ ಮುಗಿಸಿದ ಜಡೇಜಾರನ್ನು ವಿರಾಟ್ ಕೊಹ್ಲಿ ವಿಶೇಷವಾಗಿ ಅಪ್ಪಿ ಅಭಿನಂದಿಸಿದ್ದಾರೆ. ಜಡೇಜಾ ಕೂಡಾ ಭಾವುಕರಾಗಿದ್ದು ಕಂಡುಬಂತು.
ಈ ಕ್ಷಣವನ್ನು ವೀಕ್ಷಿಸಿದ ಅಭಿಮಾನಿಗಳು ಇದು ನಿವೃತ್ತಿಯ ಸೂಚನೆಯಿರಬಹುದು ಎಂದು ವಿಶ್ಲೇಷಿಸಿದ್ದಾರೆ. ಇಂದು 10 ಓವರ್ ಬೌಲಿಂಗ್ ಮಾಡಿದ ಜಡೇಜಾ 30 ರನ್ ನೀಡಿ ಟಾಮ್ ಲಥಮ್ ರ ವಿಕೆಟ್ ಕಬಳಿಸಿದ್ದಾರೆ.
36 ವರ್ಷದ ರವೀಂದ್ರ ಜಡೇಜಾ ಈಗಾಗಲೇ ಟಿ20 ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದಾರೆ. ಕಳೆದ ಟಿ20 ವಿಶ್ವಕಪ್ ಫೈನಲ್ ಬಳಿಕ ಅವರು ವಿದಾಯ ಘೋಷಿಸಿದ್ದರು. ಇದೀಗ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಮಾತ್ರ ಆಡುತ್ತಿದ್ದಾರೆ. ಇಂದು ಪಂದ್ಯದ ಬಳಿಕ ಅವರು ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.