ಟೆಸ್ಟ್ ಸ್ಪೆಷಲಿಸ್ಟ್ ಎಂಬ ಹಣೆಪಟ್ಟಿಯೇ ಚೇತೇಶ್ವರ ಪೂಜಾರರನ್ನು ಕಾಪಾಡುತ್ತಿದೆಯೇ?

ಭಾನುವಾರ, 7 ಮಾರ್ಚ್ 2021 (09:18 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ಟೀಂ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿರುವ ಚೇತೇಶ್ವರ ಪೂಜಾರ ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ಹಾಗಿದ್ದರೂ ಅವರು ತಂಡದಲ್ಲಿ ಮುಂದುವರಿಯುತ್ತಿರುವುದು ಟೆಸ್ಟ್ ಸ್ಪೆಷಲಿಸ್ಟ್ ಎಂಬ ಹಣೆಪಟ್ಟಿಯಿಂದಾಗಿ ಎಂದರೂ ತಪ್ಪಲ್ಲ.


ಟೆಸ್ಟ್ ಕ್ರಿಕೆಟ್ ಗೆ ರಿಷಬ್ ಪಂತ್ ರಂತಹ ಹೊಡೆಬಡಿಯ ಆಟಗಾರರಿಗಿಂತ ಚೇತೇಶ್ವರ ಪೂಜಾರರಂತೆ ನಿಂತು ಆಡುವ ಆಟಗಾರರ ಅಗತ್ಯ ಹೆಚ್ಚು. ಆದರೆ ಕೇವಲ ಕೆಲವು ಹೊತ್ತು ಬಾಲ್ ದಂಡಿಸಿ ರನ್ ಗಳಿಸದೇ ಪೆವಿಲಿಯನ್ ಗೆ ನಡೆಯುತ್ತಿರುವ ಪೂಜಾರರಿಂದ ಭಾರತಕ್ಕೆ ಇತ್ತೀಚೆಗೆ ಹೆಚ್ಚು ಲಾಭವಾಗಿಲ್ಲ.

ಹಾಗಿದ್ದರೂ ಅವರು ತಂಡದಲ್ಲಿ ಉಳಿದುಕೊಂಡಿದ್ದಾರೆಂದರೆ ಅವರ ನಿಧಾನಗತಿಯ ಬ್ಯಾಟಿಂಗ್ ನ ಅದೃಷ್ಟದಿಂದಾಗಿ. ಅಜಿಂಕ್ಯಾ ರೆಹಾನೆ ಕೂಡಾ ಇದೇ ಕೆಟಗರಿಗೆ ಸೇರಿದವರೇ. ಕೆಲವೊಮ್ಮೆ ಸಂಕಷ್ಟದ ಸಮಯದಲ್ಲಿ ಈ ಬ್ಯಾಟ್ಸ್ ಮನ್ ಗಳು ತಂಡಕ್ಕೆ ಉಪಯುಕ್ತರಾಗುತ್ತಾರೆ ಎಂಬ ಕಾರಣಕ್ಕೆ ತಂಡದಲ್ಲಿ ಉಳಿಸಿಕೊಳ್ಳಲಾಗುತ್ತಿದೆ.

ಆದರೆ ಈ ಇಬ್ಬರೂ ಬ್ಯಾಟ್ಸ್ ಮನ್ ಗಳೂ ರನ್ ಗಳಿಸುವುದೇ ಅಪರೂಪವಾಗಿಬಿಟ್ಟಿದೆ. ಬಹುಶಃ ಇಬ್ಬರ ಸ್ಥಾನಕ್ಕೆ ಪರ್ಯಾಯವಾಗಿ ಮತ್ತೊಬ್ಬರ ಆಗಮನವಾಗದೇ ಟೀಂ ಇಂಡಿಯಾಕ್ಕೆ ಸಂಕಷ್ಟ ತಪ್ಪದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ