ಧವನ್ ಸಿಡಿಯಲಿಲ್ಲ! ಪೂಜಾರ ಕೈ ಹಿಡಿಯಲಿಲ್ಲ! ಟೀಂ ಇಂಡಿಯಾ ಗತಿ?

ಶನಿವಾರ, 2 ಡಿಸೆಂಬರ್ 2017 (11:38 IST)
ದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಭಾರತ ಊಟದ ವಿರಾಮದ ವೇಳೆಗೆ 2 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿದೆ.
 

ಆರಂಭದಲ್ಲೇ ದಿಲ್ರುವಾನ್ ರಿಂದ ಜೀವದಾನ ಪಡೆದರೂ ಅದನ್ನು ಬಳಸಿಕೊಳ್ಳದ ಶಿಖರ್ ಧವನ್  23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ದಿಲ್ರುವಾನ್ ಗೆ ಇದು 100 ನೇ ಟೆಸ್ಟ್ ವಿಕೆಟ್ ಆಗಿತ್ತು. ಇದಾದ ಬಳಿಕ ಕ್ರೀಸ್ ಗೆ ಬಂದ ಚೇತೇಶ್ವರ ಪೂಜಾರ ಎಂದಿನಂತೆ ತೀರಾ ರಕ್ಷಣಾತ್ಮಕವಾಗಿ ಆಡದೇ ಆಕ್ರಮಣಕಾರಿ ಆಟ ತೋರಿದರು.

ಪರಿಣಾಮ ನಾಲ್ಕು ಬೌಂಡರಿಗಳನ್ನು ಒಳಗೊಂಡ 23 ರನ್ ಗಳಿಸಿ ಅವರೂ ಬೇಗನೇ ಪೆವಿಲಿಯನ್ ಸೇರಿಕೊಂಡರು. ಈ ವಿಕೆಟ್ ಲಹಿರು ಗಾಮಗೆ ಪಾಲಾಯಿತು. ಹೀಗಾಗಿ ಭಾರತ ಸಂಕಷ್ಟಕ್ಕೆ ಸಿಲುಕಿತು. ಆದರೆ ಇನ್ನೊಂದೆಡೆ ಭದ್ರವಾಗಿ ನಿಂತ ಮುರಳಿ ವಿಜಯ್ ಆಕ್ರಮಣಕಾರಿಯಾಗಿದ್ದರೂ ಎಚ್ಚರಿಕೆಯಿಂದ ಆಡಿ 51 ರನ್ ಗಳಿಸಿದರು. ಇನ್ನೊಂದು ತುದಿಯಲ್ಲಿ ನಾಯಕ ವಿರಾಟ್ ಕೊಹ್ಲಿ 17 ರನ್ ಗಳಿಸಿ ಆಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ