ಗೆಳೆಯ ತಂದುಕೊಟ್ಟ ನೀರ್ ದೋಸೆ ಚಪ್ಪರಿಸಿದ ವಿರಾಟ್ ಕೊಹ್ಲಿ ಹೇಳಿದ್ದೆಂತ ಗೊತ್ತುಂಟಾ?!

ಬುಧವಾರ, 8 ಜುಲೈ 2020 (10:47 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಮ್ಮೂರ ತಿಂಡಿ ನೀರ್ ದೋಸೆ ಬಗ್ಗೆ ಹೇಳಿಕೊಂಡಿದ್ದಾರೆ. ಗೆಳೆಯ, ಸಹ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ನೀಡಿದ ನೀರ್ ದೋಸೆ ಚಪ್ಪರಿಸಿದ ಕೊಹ್ಲಿ ಹೇಳಿದ್ದೇನು ಗೊತ್ತಾ?


ಮಂಗಳೂರಿನ ಸಾಂಪ್ರದಾಯಿಕ ತಿಂಡಿಗಳಲ್ಲಿ ನೀರ್ ದೋಸೆಯೂ ಒಂದು. ಇದನ್ನು ತಾಯಿಯ ಕೈಯಲ್ಲಿ ತಯಾರಿಸಿ ಶ್ರೇಯಸ್ ಕೊಹ್ಲಿ ಮನೆಗೆ ತೆರಳಿ ನೀಡಿದ್ದಾರಂತೆ. ಇದನ್ನು ಚಪ್ಪರಿಸಿದ ಕೊಹ್ಲಿ ‘ಆಹಾ.. ಎಂಥಾ ರುಚಿ ಗೆಳೆಯ.. ನಿನ್ನ ಅಮ್ಮನಿಗೊಂದು ಥ್ಯಾಂಕ್ಸ್ ಹೇಳು. ಇಂತಹದ್ದೊಂದು ದೋಸೆಯನ್ನು ನಾನು ಜೀವಮಾನದಲ್ಲಿ ತಿಂದಿರಲಿಲ್ಲ. ಹಾಗೆಯೇ ನಾವು ಪ್ರತಿಯಾಗಿ ಕಳುಹಿಸಿ ಮಶ್ರೂಮ್ ಬಿರಿಯಾನಿ ತಿಂದು  ಹೇಗಿದೆ ಹೇಳು’ ಎಂದು ಬರೆದುಕೊಂಡಿದ್ದಾರೆ.

ಅಂತೂ ಮಂಗಳೂರು ತಿಂಡಿಯ ಬಗ್ಗೆ ಕೊಹ್ಲಿ ಬರೆದುಕೊಂಡಿರುವುದು ನೆಟ್ಟಿಗರಿಗೆ ಖುಷಿಯಾಗಿದೆ. ಕೆಲವರು ನೀರ್ ದೋಸೆಗೆ ಏನು ಕಾಂಬಿನೇಷನ್ ಚೆನ್ನಾಗಿರುತ್ತದೆ ಎಂದು ಸಲಹೆಯನ್ನೂ ಕೊಟ್ಟಿದ್ದಾರೆ!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ