ಮುಂಬೈ: ರೋಹಿತ್ ಶರ್ಮಾರಿಂದ ತೆರವಾಗಿರುವ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕತ್ವದ ಹೊಣೆ ಬ್ಯಾಟಿಗ ಶುಬ್ಮನ್ ಗಿಲ್ ಹೆಗಲಿಗೇರಿದೆ. ಟೀಂ ಇಂಡಿಯಾ ಇಂಗ್ಲೆಂಡ್ ಸರಣಿಗೆ ತಂಡ ಇದೀಗ ಪ್ರಕಟವಾಗಿದ್ದು ತಂಡದ ಫುಲ್ ಲಿಸ್ಟ್ ಇಲ್ಲಿದೆ.
ರೋಹಿತ್ ಶರ್ಮಾ ಟೆಸ್ಟ್ ತಂಡಕ್ಕೆ ವಿದಾಯ ಘೋಷಿಸಿದ ಬಳಿಕ ಅವರ ಸ್ಥಾನಕ್ಕೆ ನಾಯಕನಾಗಿ ಯಾರಾಗಬಹುದು ಎಂಬ ಕುತೂಹಲ ಎಲ್ಲರಲ್ಲಿತ್ತು. ಗಿಲ್ ಹೆಸರು ಮುಂಚೂಣಿಯಲ್ಲಿತ್ತು. ಅವರ ಜೊತೆಗೆ ಕೆಎಲ್ ರಾಹುಲ್, ರಿಷಭ್ ಪಂತ್ ಹೆಸರುಗಳೂ ಚಾಲ್ತಿಯಲ್ಲಿತ್ತು. ಆದರೆ ಇದೀಗ ಗಿಲ್ ಗೆ ನಾಯಕತ್ವ ಒಲಿದಿದೆ.
ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕರಾಗಿ ಕಿರು ಅನುಭವ ಹೊಂದಿರುವ ಗಿಲ್ ಈ ಅವಧಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಟೆಸ್ಟ್ ಫಾರ್ಮ್ಯಾಟ್ ನಲ್ಲಿ ಗಿಲ್ ಅತ್ಯುತ್ತಮ ಬ್ಯಾಟಿಗ ಕೂಡಾ. ಇನ್ನು ಭವಿಷ್ಯದ ದೃಷ್ಟಿಯಿಂದ ತಂಡಕ್ಕೆ ಯುವ ನಾಯಕನ ಅಗತ್ಯವಿತ್ತು. ಆ ಕಾರಣಕ್ಕೆ 25 ವರ್ಷದ ಗಿಲ್ ಗೆ ನಾಯಕತ್ವದ ಹೊಣೆ ನೀಡಲಾಗಿದೆ.
ಉಳಿದಂತೆ ತಂಡದ ವಿವರ ಇಲ್ಲಿದೆ ನೋಡಿ: ಶುಬ್ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ ಜ್ಯುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶ್ರಾದ್ಧೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಆಕಾಶ್ ದೀಪ್, ಅರ್ಷ್ ದೀಪ್ ಸಿಂಗ್, ಕುಲದೀಪ್ ಯಾದವ್.