ವಿಶ್ವಕಪ್ ನಲ್ಲಿ ಇಷ್ಟು ಪಂದ್ಯಗಳಿಗೆ ಹಾರ್ದಿಕ್ ಪಾಂಡ್ಯ ಗೈರು

ಬುಧವಾರ, 1 ನವೆಂಬರ್ 2023 (17:00 IST)
ಮುಂಬೈ: ಏಕದಿನ ವಿಶ್ವಕಪ್ ನಲ್ಲಿ ಗಾಯಗೊಂಡು ಸದ್ಯಕ್ಕೆ ತಂಡದಿಂದ ಹೊರಗುಳಿದಿರುವ ಟೀಂ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತಷ್ಟು ಪಂದ್ಯ ಕಳೆದುಕೊಳ್ಳಲಿದ್ದಾರೆ.

ಗ್ರೂಪ್ ಹಂತದಲ್ಲಿ ಟೀಂ ಇಂಡಿಯಾ ಇನ್ನು ಮೂರು ಪಂದ್ಯಗಳನ್ನು ಆಡಲಿದೆ. ಈ ಮೂರೂ ಪಂದ್ಯಗಳಿಗೆ ಹಾರ್ದಿಕ್ ಪಾಂಡ್ಯ ಗೈರಾಗಲಿದ್ದಾರೆ. ಸೆಮಿಫೈನಲ್ ಹಂತದ ಪಂದ್ಯದ ವೇಳೆಗೆ ಪಾಂಡ್ಯ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಕ್ಟೋಬರ್ 19 ರಂದು ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಜಾರಿ ಬಿದ್ದು ಕಾಲಿಗೆ ಗಾಯ ಮಾಡಿಕೊಂಡಿದ್ದರು. ಇದೀಗಷ್ಟೇ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ