IND vs AUS test: ಆಸ್ಟ್ರೇಲಿಯಾ ಆಲೌಟ್, ಟೀಂ ಇಂಡಿಯಾಕ್ಕೆ ಮಹತ್ವದ ಮುನ್ನಡೆ

Krishnaveni K

ಶನಿವಾರ, 23 ನವೆಂಬರ್ 2024 (10:06 IST)
Photo Credit: X
ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 104 ರನ್ ಗಳಿಗೆ ಆಲೌಟ್ ಆದ ಆಸ್ಟ್ರೇಲಿಯಾ ಭಾರತಕ್ಕೆ ಮಹತ್ವದ ಮುನ್ನಡೆ ಬಿಟ್ಟುಕೊಟ್ಟಿದೆ.

ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 150 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಆಸೀಸ್ 104 ರನ್ ಗಳಿಗೆ ಆಲೌಟ್ ಆಗಿದ್ದು 46 ರನ್ ಗಳ ಮಹತ್ವದ ಮುನ್ನಡೆ ಪಡೆದಿದೆ. ಪರ್ತ್ ಪಿಚ್ ನೋಡಿದರೆ ಈ ಮುನ್ನಡೆ ಪಂದ್ಯಕ್ಕೆ ನಿರ್ಣಾಯಕವಾಗಲಿದೆ.

ಆಸ್ಟ್ರೇಲಿಯಾ ನಿನ್ನೆ 67 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿತ್ತು. ಆದರೆ ಇಂದು ಕೊನೆಯ ವಿಕೆಟ್ ಗೆ ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಝಲ್ ವುಡ್ ಉತ್ತಮ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ 100 ರ ಗಡಿ ದಾಟುವಂತೆ ಮಾಡಿದರು.

ಭಾರತದ ಪರ ಜಸ್ಪ್ರೀತ್ ಬುಮ್ರಾ 5, ಹರ್ಷಿತ್ ರಾಣಾ 3 ಮತ್ತು ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು. ಆ ಮೂಲಕ ಎಲ್ಲಾ ವಿಕೆಟ್ ವೇಗಿಗಳ ಪಾಲಾಯಿತು. ವೇಗಿಗಳಿಗೆ ನೆರವಾಗುತ್ತಿದ್ದ ಪಿಚ್ ನಲ್ಲಿ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಕೇವಲ 2 ಓವರ್ ಬೌಲಿಂಗ್ ನಡೆಸಿದರೂ ವಿಕೆಟ್ ಸಿಗಲಿಲ್ಲ. ಇದೀಗ ಭೋಜನ ವಿರಾಮದ ಬಳಿಕ ಭಾರತದ ದ್ವಿತೀಯ ಇನಿಂಗ್ಸ್ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ