IND vs ENG: ರವೀಂದ್ರ ಜಡೇಜಾಗೆ ನಾಲ್ಕು ವಿಕೆಟ್, ಇಂಗ್ಲೆಂಡ್ ಆಲೌಟ್

Krishnaveni K

ಶನಿವಾರ, 24 ಫೆಬ್ರವರಿ 2024 (10:55 IST)
Photo Courtesy: Twitter
ರಾಂಚಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 353 ರನ್ ಗಳಿಗೆ ಆಲೌಟ್ ಆಗಿದೆ. ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್ ಕಬಳಿಸಿದ್ದಾರೆ.

ನಿನ್ನೆ 7 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿ ದಿನದಾಟ ಮುಗಿಸಿದ್ದ ಇಂಗ್ಲೆಂಡ್ ಇಂದು 51 ರನ್ ಸೇರಿಸಿ ಸರ್ವಪತನ ಕಂಡಿತು. ನಿನ್ನೆ ಅಜೇಯರಾಗಿದ್ದ ಜೋ ರೂಟ್ ಇಂದು 122 ರನ್ ಗಳಿಸಿ ಔಟಾಗದೇ ಉಳಿದರು. ನಿನ್ನೆ 31 ರನ್ ಗಳಿಸಿದ್ದ ಒಲಿ ರಾಬಿನ್ಸನ್ 58 ರನ್ ಸಿಡಿಸಿದರು. ಇಂದಿನ ಮೂರೂ ವಿಕೆಟ್ ರವೀಂದ್ರ ಜಡೇಜಾ ಪಾಲಾಯಿತು. ನಿನ್ನೆ ಒಂದು ವಿಕೆಟ್ ಕಬಳಿಸಿದ್ದ ಜಡೇಜಾ ಒಟ್ಟು ಮೊದಲ ಇನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ತಮ್ಮದಾಗಿಸಿಕೊಂಡರು.

ಭಾರತದ ಪರ ಯಾಕೋ ಈ ಇನಿಂಗ್ಸ್ ನಲ್ಲಿ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ಹೆಚ್ಚಿನ ಯಶಸ್ಸು ದೊರೆಯಲಿಲ್ಲ. 22 ಓವರ್ ಬೌಲಿಂಗ್ ಮಾಡಿದ ಅವರಿಗೆ ದಕ್ಕಿದ್ದು ಕೇವಲ 1 ವಿಕೆಟ್. ಉಳಿದಂತೆ ಮೊಹಮ್ಮದ್ ಸಿರಾಜ್ 2, ಚೊಚ್ಚಲ ಪಂದ್ಯವಾಡುತ್ತಿರುವ ಆಕಾಶ್ ದೀಪ್ 3 ವಿಕೆಟ್ ಕಬಳಿಸಿದ್ದಾರೆ. ಕುಲದೀಪ್ ಯಾದವ್ ಗೆ ಯಾವುದೇ ವಿಕೆಟ್ ಸಿಗಲಿಲ್ಲ.

ಬಹುಶಃ ಜೋ ರೂಟ್ ನಿಂತು ಆಡದೇ ಇದ್ದಿದ್ದರೆ ಇಂಗ್ಲೆಂಡ್ ಪರಿಸ್ಥಿತಿ ಇನ್ನಷ್ಟು ಹೀನಾಯವಾಗುತ್ತಿತ್ತು. ಆದರೆ ರೂಟ್ ಟಿಪಿಕಲ್ ಟೆಸ್ಟ್ ಇನಿಂಗ್ಸ್ ಮೂಲಕ ತಂಡಕ್ಕೆ ಆಸರೆಯಾದರು. ಭಾರತ ಇದೀಗ ಇನಿಂಗ್ಸ್ ಆರಂಭಿಸಿದ್ದು ನೋ ಬಾಲ್ ಮೂಲಕ ಖಾತೆ ತೆರೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ