IND vs ENG test: ಬೌಂಡರಿ ಗೆರೆ ಬಳಿ ನಿದ್ರೆ ಮಾಡುತ್ತಿದ್ದ ಬಾಲ್ ಬಾಯ್ ವಿಡಿಯೋ ವೈರಲ್

Krishnaveni K

ಶನಿವಾರ, 24 ಫೆಬ್ರವರಿ 2024 (09:29 IST)
Photo Courtesy: Twitter
ರಾಂಚಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಕ್ರಿಕೆಟಿಗರ ಆಟದ ಜೊತೆ ಬಾಲ್ ಬಾಯ್ ಎಲ್ಲರ ಗಮನ ಸೆಳೆದಿದ್ದಾನೆ.

ರಾಂಚಿ ಮೈದಾನದಲ್ಲಿ ಬೌಂಡರಿ ಗೆರೆ ಬಳಿ ಬಾಲ್ ಹಿಡಿಯಲು ಕುಳಿತಿದ್ದ ಬಾಲ್ ಬಾಯ್ ಒಬ್ಬ ಕುಳಿತಲ್ಲಿಯೇ ನಿದ್ರೆ ಹೋಗಿದ್ದ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನೆಟ್ಟಿಗರು ಈತನ ಬಗ್ಗೆ ಮೆಮೆ ಸೃಷ್ಟಿಸಿ ಕಾಲೆಳೆದಿದ್ದರು. ಕಾಮೆಂಟರಿ ಮಾಡುತ್ತಿದ್ದ ರವಿಶಾಸ್ತ್ರಿ ಕೂಡಾ ಬಾಲ್ ಬಾಯ್ ಬಗ್ಗೆ ಹೇಳಿದ್ದಾರೆ.

ಮೊಹಮ್ಮದ್ ಸಿರಾಜ್ ಬೌಲಿಂಗ್ ಮಾಡುತ್ತಿರಬೇಕಾದರೆ ಬೌಂಡರಿ ಗೆರೆ ಬಳಿಯಿದ್ದ ಬಾಲ್ ಬಾಯ್ ಅಲ್ಲೇ ಮಲಗಿ ನಿದ್ರೆ ಹೋಗಿದ್ದ. ಆತನ ದೃಶ್ಯ ಎಲ್ ಇಡಿಯಲ್ಲಿ ತೋರಿಸಿದಾಗ ಎಲ್ಲರ ಮುಖದಲ್ಲಿ ನಗು ಮೂಡಿತ್ತು. ಕಾಮೆಂಟರಿ ಮಾಡುತ್ತಿದ್ದ ರವಿ ಶಾಸ್ತ್ರಿ ‘ಆ ಹುಡುಗ ಒಳ್ಳೆ ಚಹಾ ಕುಡಿದಿದ್ದ ಎನಿಸುತ್ತದೆ’ ಎಂದು ತಮಾಷೆ ಮಾಡಿದರು.

ಇದುವರೆಗೆ ನಡೆದ ಎಲ್ಲಾ ಪಂದ್ಯಗಳಲ್ಲೂ ಬೌಂಡರಿ, ಸಿಕ್ಸರ್ ಗಳ ಮಳೆಯಾಗುತ್ತಿತ್ತು. ಹೀಗಾಗಿ ಬಾಲ್ ಬಾಯ್ ಗಳಿಗೂ ಕೆಲಸವಿರುತ್ತಿತ್ತು. ಆದರೆ ಮೊದಲ ದಿನ ಇಂಗ್ಲೆಂಡ್ ನಿಧಾನಗತಿಯ ಬ್ಯಾಟಿಂಗ್ ಮಾಡಿತ್ತು. ಅದರಲ್ಲೂ ಜೋ ರೂಟ್ ಪಕ್ಕಾ ಟೆಸ್ಟ್ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದ್ದರು. ಇದರಿಂದಾಗಿ ಬಾಲ್ ಬಾಯ್ ಗಳಿಗೆ ಕೆಲಸವಿಲ್ಲವಾಗಿತ್ತು. ಇದೇ ಕಾರಣಕ್ಕೆ ಆತನೂ ನಿದ್ರೆಯೇ ಮಾಡಿಬಿಟ್ಟಿದ್ದ. ಆತನ ನಿದ್ರೆ ನಿನ್ನೆಯ ಬ್ಯಾಟಿಂಗ್ ಶೈಲಿಗೆ ಸಾಕ್ಷಿಯಾಗಿತ್ತು.

ನಿನ್ನೆಯ ದಿನದಂತ್ಯಕ್ಕೆ ಜೋ ರೂಟ್ ಶತಕದ ಸಹಾಯದಿಂದ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿತ್ತು. ಜೋ ರೂಟ್ 106 ಮತ್ತು ಒಲಿ ರಾಬಿನ್ಸನ್ 31 ರನ್ ಗಳಿಸಿ ಕ್ರೀಸ್ ನಲ್ಲಿದ್ದರು. ಮೊದಲ ಮೂರು ಟೆಸ್ಟ್ ಗಳಿಗೆ ಹೋಲಿಸಿದರೆ ಈ ಪಂದ್ಯದಲ್ಲಿ ಕೊಮಚ ನಿಧಾನಗತಿಯ ಬ್ಯಾಟಿಂಗ್ ನಡೆಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ