IND vs ENG T20: ಇಂದೂ ಮೊಹಮ್ಮದ್ ಶಮಿಗೆ ಬೆಂಚ್ ಬಿಸಿ ಮಾಡೋದೇ ಪಕ್ಕಾ
ಮೊಹಮ್ಮದ್ ಶಮಿ 2023 ರ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಆಡಿದ್ದೇ ಕೊನೆ. ಅದಾದ ಬಳಿಕ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡಿಯೇ ಇಲ್ಲ ಏಕದಿನ ವಿಶ್ವಕಪ್ ನ ಹೀರೋ ಆಗಿದ್ದ ಶಮಿ ಬಳಿಕ ಗಾಯ, ಶಸ್ತ್ರಚಿಕಿತ್ಸೆಯಿಂದಾಗಿ ಬರೋಬ್ಬರಿ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ಕ್ರಿಕೆಟ್ ನಿಂದ ದೂರವುಳಿದರು.
ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡುವ ಮೊದಲು ಎರಡು ದೇಶೀಯ ಟೂರ್ನಿಯಲ್ಲಿ ಆಡಿ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಹಾಗಿದ್ದರೂ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಅವರ ತವರಿನಲ್ಲೇ ಪಂದ್ಯ ನಡೆದರೂ ಆಡುವ ಯೋಗವಿರಲಿಲ್ಲ. ಸ್ಪಿನ್ ಸ್ನೇಹಿ ಪಿಚ್ ಎಂಬ ಕಾರಣಕ್ಕೆ ಶಮಿ ಹೊರಗುಳಿಯಬೇಕಾಯಿತು.
ಆದರೆ ಇಂದೂ ಕೂಡಾ ಅವರಿಗೆ ಅವಕಾಶ ಸಿಗುವುದು ಅನುಮಾನವಾಗಿದೆ. ಚೆನ್ನೈ ಪಿಚ್ ಕೂಡಾ ವೇಗಿಗಳಿಗೆ ಅಷ್ಟು ಸಹಕರಿಸುವಂತಹ ಪಿಚ್ ಅಲ್ಲ. ಅಲ್ಲದೆ ಮೊದಲ ಪಂದ್ಯದಲ್ಲಿ ಸ್ಪಿನ್ನರ್ ಗಳೇ ಮೇಲುಗೈ ಸಾಧಿಸಿದ್ದರು. ಹೀಗಾಗಿ ಈ ಪಂದ್ಯದಲ್ಲೂ ಯಾವುದೇ ಬದಲಾವಣೆ ಸಾಧ್ಯತೆ ಕಡಿಮೆ. ಹೀಗಾಗಿ ಶಮಿ ಇಂದಿನ ಪಂದ್ಯದಿಂದಲೂ ಹೊರಗುಳಿಯುವ ಸಾಧ್ಯತೆಯಿದೆ.