ಮಹಿಳೆಯರ ಟಿ20 ಏಷ್ಯಾಕಪ್‌ನಲ್ಲಿ ಭಾರತ ತಂಡಕ್ಕೆ ಇಂದು ಯುಎಇ ಸವಾಲು

Sampriya

ಭಾನುವಾರ, 21 ಜುಲೈ 2024 (10:09 IST)
Photo Courtesy X
ಶ್ರೀಲಂಕಾ: ಹಾಲಿ ಚಾಂಪಿಯನ್‌ ಭಾರತ ಮಹಿಳೆಯರ ತಂಡವು ಇಲ್ಲಿ ನಡೆಯುತ್ತಿರುವ ಮಹಿಳೆಯರ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಇಂದು ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು ಎದುರಿಸಲಿದೆ.

ಹರ್ಮನ್‌ಪ್ರೀತ್‌ ಕೌರ್‌ ಪಡೆಯು ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಜಯ ಗಳಿಸಿತ್ತು. ಇದೀಗ ಯುಎಇ ವಿರುದ್ಧ ಸುಲಭ ಜಯ ಸಾಧಿಸಿ, ಸೆಮಿಫೈನಲ್ ಪ್ರವೇಶಿಸುವತ್ತ ಚಿತ್ತ ನೆಟ್ಟಿದೆ.

ಅನುಭವ ಮತ್ತು ಸಾಮರ್ಥ್ಯದಲ್ಲಿ ಭಾರತ ತಂಡವು ಯುಎಇಗಿಂತ ಬಲಿಷ್ಠವಾಗಿದೆ. ಮಧ್ಯಮವೇಗಿ ಪೂಜಾ ವಸ್ತ್ರಕರ್, ಸ್ಪಿನ್ನರ್ ದೀಪ್ತಿ ಶರ್ಮಾ ಹಾಗೂ ರೇಣುಕಾ ಸಿಂಗ್ ಅವರು ಉತ್ತಮ ಲಯದಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಪಾಕ್ ತಂಡವು ಸಾಧಾರಣ ಮೊತ್ತಕ್ಕೆ ಕುಸಿಯಲು ಈ ಮೂವರ ಬೌಲಿಂಗ್ ಕಾರಣವಾಗಿತ್ತು.

ಭಾರತೀಯ ಮೂಲದ ಆಟಗಾರ್ತಿಯರು ಹೆಚ್ಚಿನ ಸಂಖ್ಯೆಯಲ್ಲಿರುವ ಯುಎಇ ಕಠಿಣ ಪೈಪೋಟಿ ಯೊಡ್ಡುವ ವಿಶ್ವಾಸದಲ್ಲಿದೆ.  ಇಶಾ ರೋಹಿತ್ ಓಜಾ ನಾಯಕತ್ವದ ತಂಡವು ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಸೋತಿತ್ತು.  ಆ ಪಂದ್ಯದಲ್ಲಿ ಕವಿಶಾ ಎಗಡೊಗೆ ಆಲ್‌ರೌಂಡ್ ಆಟವಾಡಿದ್ದರು. ಖುಷಿ ಶರ್ಮಾ ಅವರು ಉತ್ತಮ ಬ್ಯಾಟಿಂಗ್ ಮಾಡಿದ್ದರು. ಭಾರತ ತಂಡದ ವಿರುದ್ಧವೂ ಮಿಂಚುವ ಛಲದಲ್ಲಿದ್ಧಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ