ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಹೈದರಾಬಾದ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಟಾಸ್ ಬಳಿಕ ಮಾತನಾಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಇದು ಪಕ್ಕಾ ಭಾರತೀಯ ಶೈಲಿಯ ಪಿಚ್. ಹೀಗಾಗಿ ಇಲ್ಲಿ ಏನಾಗಬಹುದು ಎಂದು ಮೊದಲೇ ಹೇಳಲು ಕಷ್ಟ. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿ ದೊಡ್ಡ ಮೊತ್ತ ಪೇರಿಸಲು ಪ್ರಯತ್ನಿಸುತ್ತೇವೆ. ಭಾರತ ಕೂಡಾ ಪ್ರಬಲ ತಂಡ. ಹೀಗಾಗಿ ನಾವು ಕಠಿಣ ಪೈಪೋಟಿ ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಈ ಪಂದ್ಯದಲ್ಲಿ ಇಂಗ್ಲೆಂಡ್ ಪರ ಹಾರ್ಟ್ಲೀ ಪದಾರ್ಪಣೆ ಮಾಡಿದ್ದಾರೆ. ಯುವ ಆಟಗಾರ ರೆಹಾನ್ ಗೂ ಅವಕಾಶ ನೀಡಲಾಗಿದೆ. ಇದು ಅವರಿಗೆ ಕೇವಲ ಎರಡನೇ ಪಂದ್ಯ. ವುಡೀ ತಂಡದ ಎಕ್ಸ್ ಫ್ಯಾಕ್ಟರ್ ಆಗಬಹುದು ಎಂಬ ವಿಶ್ವಾಸ ಇಂಗ್ಲೆಂಡ್ ನಾಯಕನಿಗಿದೆ.
ಇತ್ತ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ನಾವೂ ಟಾಸ್ ಗೆದ್ದಿದ್ದರೆ ಮೊದಲು ಬ್ಯಾಟಿಂಗ್ ಮಾಡುತ್ತಿದ್ದೆವು ಎಂದಿದ್ದರು. ಆದರೆ ಮೊದಲು ಬೌಲಿಂಗ್ ಮಾಡಿದರೂ ಎದುರಾಳಿಗಳನ್ನು ನಿಯಂತ್ರಿಸಬಲ್ಲ ಆಟಗಾರರು ನಮ್ಮಲ್ಲಿದ್ದಾರೆ ಎಂದಿದ್ದಾರೆ. ಭಾರತದ ಈ ಪಂದ್ಯದಲ್ಲಿ ಮೂವರು ಸ್ಪಿನ್ನರ್, ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿಯುತ್ತಿದೆ.
ಭಾರತ ತಂಡ ಇಂತಿದೆ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್ ತಂಡ: ಜ್ಯಾಕ್ ಕ್ರಾಲೇ, ಬೆನ್ ಡಕೆಟ್, ಒಲೀ ಪಾಪ್, ಜೋ ರೂಟ್, ಜಾನಿ ಬೇರ್ ಸ್ಟೋ, ಬೆ ನ್ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹಮ್ಮದ್, ಟಾಮ್ ಹಾರ್ಟ್ಲೀ, ಮಾರ್ಕ್ ವುಡ್, ಜಾಕ್ ಲೀಚ್.