ಐಪಿಎಲ್ 2023: ಬೌಲರ್ ಗಳ ಕರಾಮತ್ತಿನಿಂದ ಗೆದ್ದ ಡೆಲ್ಲಿ
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಲಷ್ಟೇ ಶಕ್ತವಾಯಿತು. ಡೇವಿಡ್ ವಾರ್ನರ್ 21, ಮನೀಶ್ ಪಾಂಡೆ 34,ಮಿಚೆಲ್ ಮಾರ್ಷ್ 25, ಅಕ್ಸರ್ ಪಟೇಲ್ 34 ರನ್ ಗಳಿಸಿದರು.
ಈ ಮೊತ್ತವನ್ನು ಹೈದರಾಬಾದ್ ಸುಲಭವಾಗಿ ಬೆನ್ನತ್ತಲು ಡೆಲ್ಲಿ ಬೌಲರ್ ಗಳು ಅವಕಾಶ ನೀಡಲಿಲ್ಲ. ಮಯಾಂಕ್ ಅಗರ್ವಾಲ್ 49, ವಾಷಿಂಗ್ಟನ್ ಸುಂದರ್ 24 ರನ್, ಹೆನ್ರಿಚ್ ಕ್ಲಾಸನ್ 34 ರನ್ ಗಳಿಸಿದರು. ಇವರನ್ನು ಬಿಟ್ಟರೆ ಉಳಿದವರಿಂದ ಸಾಥ್ ಸಿಗಲಿಲ್ಲ.ಅಕ್ಸರ್ ಪಟೇಲ್, ಅನ್ ರಿಚ್ ನೋರ್ಜೆ ತಲಾ 2 ವಿಕೆಟ್ ಕಬಳಿಸಿದರು. ಇದರಿಂದಾಗಿ ಹೈದರಾಬಾದ್ ಕೊನೆಗೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು.