ಐಪಿಎಲ್ 2023: ಡೆಲ್ಲಿ ಗೆಲುವು, ಉಳಿದ ತಂಡಗಳಿಗೆ ಆತಂಕ

ಗುರುವಾರ, 18 ಮೇ 2023 (07:00 IST)
Photo Courtesy: Twitter
ಧರ್ಮಶಾಲಾ: ಐಪಿಎಲ್ 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 15 ರನ್ ಗಳ ಗೆಲುವು ಸಾಧಿಸಿ ಪ್ಲೇ ಆಫ್ ಕನಸಿನಲ್ಲಿರುವ ಉಳಿದ ತಂಡಗಳಿಗೆ ಆತಂಕ ತಂದಿದೆ.

ಡೆಲ್ಲಿ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದೆ. ಹಾಗಾಗಿ ಇದು ಔಪಚಾರಿಕ ಪಂದ್ಯವಷ್ಟೇ. ಆದರೆ ಡೆಲ್ಲಿ ಈ ಪಂದ್ಯವನ್ನು ಗೆದ್ದಿದ್ದರಿಂದ ಇತರ ತಂಡಗಳ ಪ್ಲೇ ಆಫ್ ಕನಸಿಗೆ ಅಡ್ಡಿ ಎದುರಾಗಿದೆ. ಪಂಜಾಬ್ ಪ್ಲೇ ಆಫ್ ಕನಸು ಕ್ಷೀಣಿಸಿದೆ. ಅತ್ತ ಚೆನ್ನೈ ವಿರುದ್ಧವೂ ಡೆಲ್ಲಿ ಇದೇ ರೀತಿ ಗೆದ್ದರೆ ಮಾತ್ರ ಆರ್ ಸಿಬಿ, ಮುಂಬೈ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ.

ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 213 ರನ್‍ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಪಂಜಾಬ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಲಷ್ಟೇ ಶಕ್ತವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ