ಐಪಿಎಲ್ 2023: ಡೆಲ್ಲಿಗೆ ಪಂಜಾಬ್ ಎದುರು ಔಪಚಾರಿಕ ಪಂದ್ಯ
ಪಂಜಾಬ್ ಕಿಂಗ್ಸ್ 12 ಪಂದ್ಯಗಳಿಂದ 6 ಗೆಲುವು ಪಡೆದಿದ್ದು, ಪ್ಲೇ ಆಫ್ ಹಂತದ ಕ್ಷೀಣ ಆಸೆ ಹೊಂದಿದೆ. ಕಳೆದ ಪಂದ್ಯ ಗೆದ್ದಿರುವ ಪಂಜಾಬ್ ಗೆ ಮತ್ತೆ ಅದೇ ಪ್ರದರ್ಶನ ಮುಂದುವರಿಸುವ ವಿಶ್ವಾಸವಿದೆ.
ಅತ್ತ ಡೆಲ್ಲಿ ಕ್ಯಾಪಿಟಲ್ಸ್ ಹೆಚ್ಚು ಕಡಿಮೆ ಟೂರ್ನಿಯಿಂದಲೇ ಹೊರಬಿದ್ದಿದೆ. ಪ್ಲೇ ಆಫ್ ಹಂತದ ಕನಸು ಭಗ್ನವಾಗಿದೆ. ಹೀಗಿದ್ದರೂ ಪ್ರತಿಷ್ಠೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗೆಲ್ಲುವ ಪ್ರಯತ್ನ ನಡೆಸಲಿದೆ. ಡೆಲ್ಲಿ ಇದುವರೆಗೆ ಆಡಿದ 12 ಪಂದ್ಯಗಳಲ್ಲಿ ಕೇವಲ 4 ಗೆಲುವು ಕಂಡಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.