ಐಪಿಎಲ್ 2023: ಇಂದು ಚಾಂಪಿಯನ್ ಚೆನ್ನೈ-ಮುಂಬೈ ಕಾದಾಟ
 
ಐಪಿಎಲ್ ನಲ್ಲಿ ಗರಿಷ್ಠ ಬಾರಿ ಚಾಂಪಿಯನ್ ಆದ ತಂಡಗಳ ಪಟ್ಟಿಯಲ್ಲಿ ಈ ಎರಡೂ ತಂಡಗಳು ಟಾಪ್ ನಲ್ಲಿವೆ. ಎರಡೂ ತಂಡಗಳಿಗೂ ಅವರದ್ದೇ ಆದ ಅಪ್ಪಟ ಅಭಿಮಾನೀ ಬಳಗವಿದೆ. ಹೀಗಾಗಿ ಇಂದಿನ ರೋಹಿತ್ ವರ್ಸಸ್ ಧೋನಿ ಕದನವನ್ನು ಜನ ಎದಿರು ನೋಡುತ್ತಿದ್ದಾರೆ.
									
				ಈ ಸೀಸನ್ ನಲ್ಲಿ ಒಂದು ಪಂದ್ಯವಾಡಿರುವ ರೋಹಿತ್ ಶರ್ಮಾ ಬಳಗ ಸೋಲು ಅನುಭವಿಸಿತ್ತು. ಅತ್ತ ಧೋನಿ ಪಡೆ ಒಂದು ಸೋಲು, ಒಂದು ಗೆಲುವು ಕಂಡಿದೆ. ಸಿಎಸ್ ಕೆ ಬೌಲಿಂಗ್ ಸುಧಾರಿಸಬೇಕಿದೆ. ಮುಂಬೈಗೂ ಬೌಲಿಂಗ್ ಚಿಂತೆಯಾಗಿದೆ. ಎರಡೂ ತಂಡಗಳೂ ಗೆಲುವಿಗಾಗಿ ಹಪಿಹಪಿಸುತ್ತಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಜಿದ್ದಾಜಿದ್ದಿನ ಕಾಳಗ ನಿರೀಕ್ಷಿಸಬಹುದು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.