ಐಪಿಎಲ್ 2023: ಪಂಜಾಬ್ ಕಿಂಗ್ಸ್, ಕೆಕೆಆರ್ ನಡುವೆ ಇಂದಿನ ಪಂದ್ಯ

ಶನಿವಾರ, 1 ಏಪ್ರಿಲ್ 2023 (08:40 IST)
Photo Courtesy: Twitter
ಮೊಹಾಲಿ: ಐಪಿಎಲ್ 2023 ರಲ್ಲಿ ಇಂದು ಕಿಂಗ್ಸ್ ಪಂಜಾಬ್ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವಿನ ಇಂದು ಮೊದಲ ಪಂದ್ಯ ನಡೆಯಲಿದೆ.

ಕಿಂಗ್ಸ್ ಪಂಜಾಬ್ ಗೆ ಶಿಖರ್ ಧವನ್ ನೇತೃತ್ವದಲ್ಲಿ ಕಣಕ್ಕಿಳಿಯುತ್ತಿದೆ. ಪಂಜಾಬ್ ನಲ್ಲಿ ಧವನ್ ಬಿಟ್ಟರೆ ಸ್ಟಾರ್ ಬ್ಯಾಟಿಗರು ಇಲ್ಲದೇ ಇರಬಹುದು ಆದರೆ ಬೌಲಿಂಗ್ ನಲ್ಲಿ ಅರ್ಷ್ ದೀಪ್ ಸಿಂಗ್ ಕಳೆದ ಐಪಿಎಲ್ ನಲ್ಲೂ ಮಿಂಚಿದ್ದರು. ಈ ಬಾರಿಯೂ ಅದೇ ಮ್ಯಾಜಿಕ್ ಮಾಡುವ ನಿರೀಕ್ಷೆಯಿದೆ.

ಕೆಕೆಆರ್ ಗೆ ಈ ಬಾರಿ ನಾಯಕ ಶ್ರೇಯಸ್ ಅಯ್ಯರ್ ಉಪಸ್ಥಿತಿ ಕಾಡಲಿದೆ. ಅವರ ಬದಲಿಗೆ ನಿತೀಶ್ ರಾಣಾ ತಂಡವನ್ನು ಮುನ್ನಡೆಸಲಿದ್ದೀರಿ. ಸುನಿಲ್ ನರೈನ್, ಆಂಡ್ರ್ಯೂ ರಸೆಲ್, ಶಕೀಬ್ ಅಲ್ ಹಸನ್, ವೆಂಕಟೇಶ್ ಅಯ್ಯರ್ ಮುಂತಾದ ಘಟಾನುಘಟಿ ಆಟಗಾರರಿದ್ದಾರೆ. ಈ ಪಂದ್ಯ ಅಪರಾಹ್ನ 3.30 ಕ್ಕೆ ನಡೆಯಲಿದೆ. ಜಿಯೋ ಆಪ್, ಸ್ಪೋರ್ಟ್ಸ್ 18 ವಾಹಿನಿಯಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ