ಐಪಿಎಲ್ 2023: ಧೋನಿ ಪಡೆಗೆ ಮೊದಲ ಪಂದ್ಯದಲ್ಲೇ ಸೋಲು
ಮೊದಲು ಬ್ಯಾಟಿಂಗ್ ಮಾಡಿದ ಧೋನಿ ಪಡೆ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಋತುರಾಜ್ ಗಾಯಕ್ ವಾಡ್ 92 ರನ್ ಸಿಡಿಸಿದರು.
ಈ ಮೊತ್ತ ಬೆನ್ನತ್ತಿದ ಗುಜರಾತ್ ಗೆ ಆಸರೆಯಾಗಿದ್ದು ಇನ್ ಫಾರ್ಮ್ ಬ್ಯಾಟಿಗ ಶುಬ್ಮನ್ ಗಿಲ್. ಗಿಲ್ ಒಟ್ಟು 36 ಎಸೆತ ಎದುರಿಸಿ 63 ರನ್ ಗಳಿಸಿದರು. ವೃದ್ಧಿಮಾನ್ ಸಹಾ 25, ಸಾಯ್ ಸುದರ್ಶನ್ 22, ವಿಜಯ್ ಶಂಕರ್ 27 ರನ್ ಗಳಿಸಿದರು. ಬೌಲಿಂಗ್ ನಲ್ಲಿ ಮಿಂಚಿದ್ದ ರಶೀದ್ ಖಾನ್ 3 ಎಸೆತಗಳಿಂದ 10 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು. ಅಂತಿಮವಾಗಿ ಗುಜರಾತ್ 19.2 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು.