ಐಪಿಎಲ್ 2023: ಡೆಲ್ಲಿ ವಿರುದ್ಧ ಗೆಲ್ಲುತ್ತಾ ಆರ್ ಸಿಬಿ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೆ ಒಂದು ಪಂದ್ಯ ಮಾತ್ರ ಗೆದ್ದಿದೆ. ಕಳೆದ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಸೋಲಿನ ಆಘಾತ ಅನುಭವಿಸಿತ್ತು. ಇದೀಗ ಮತ್ತೆ ಗೆಲುವು ಅನಿವಾರ್ಯ ಎನ್ನುವ ಸ್ಥಿತಿಯಲ್ಲಿ ಆರ್ ಸಿಬಿ ಇದೆ.
ಇನ್ನು, ಡೆಲ್ಲಿ ಕ್ಯಾಪಿಟಲ್ಸ್ ನದ್ದು ಅದಕ್ಕಿಂತ ಹೀನಾಯ ಸ್ಥಿತಿ. ಇದುವರೆಗೆ ಆಡಿದ ಒಂದೇ ಒಂದು ಪಂದ್ಯದಲ್ಲಿ ಡೆಲ್ಲಿ ಗೆದ್ದಿಲ್ಲ. ಹೀಗಾಗಿ ಡೇವಿಡ್ ವಾರ್ನರ್ ಪಡೆಗೆ ದೊಡ್ಡ ಸವಾಲು ಮುಂದಿದೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಇಂದು ಮಧ್ಯಾಹ್ನ 3.30 ಕ್ಕೆ ನಡೆಯಲಿದೆ.