ಐಪಿಎಲ್ 2023: ಆರ್ ಸಿಬಿಗೆ ಇಂದು ಮೊದಲ ಎದುರಾಳಿ ಮುಂಬೈ

ಭಾನುವಾರ, 2 ಏಪ್ರಿಲ್ 2023 (09:00 IST)
Photo Courtesy: Twitter
ಬೆಂಗಳೂರು: ಐಪಿಎಲ್ 2023 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡುತ್ತಿದೆ.

ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿದ್ದು, ಬಹಳ ದಿನಗಳ ನಂತರ ಉದ್ಯಾನನಗರಿಗೆ ಕ್ರಿಕೆಟ್ ಬಂದಿರುವುದರಿಂದ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ.

ಆರ್ ಸಿಬಿ ಮತ್ತು ಮುಂಬೈ ಪಂದ್ಯವೆಂದರೆ ರೋಚಕ ಹಣಾಹಣಿ ಖಚಿತ. ಕಳೆದ ಸೀಸನ್ ನಲ್ಲಿ ಮುಂಬೈ ಕೊಂಚ ಕಳೆಗುಂದಿತ್ತು. ಈ ಸೀಸನ್ ನಲ್ಲಿ ಮತ್ತೆ ಸಿಡಿದೇಳುವ ವಿಶ್ವಾಸವಿದೆ. ಇತ್ತ ಫಾ ಡು ಪ್ಲೆಸಿಸ್ ನೇತೃತ್ವದ ಆರ್ ಸಿಬಿಗೆ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್, ಮೊಹಮ್ಮದ್ ಸಿರಾಜ್ ಬಲ. ತವರಿನ ಅಂಗಣದಲ್ಲಿ ಆಡುತ್ತಿರುವುದರಿಂದ ಆರ್ ಸಿಬಿ ಗೆಲುವಿನ ವಿಶ್ವಾಸದಲ್ಲಿದೆ. ಎಲ್ಲಕ್ಕಿಂತ ಮಿಗಿಲಾಗಿ ಭಾರತದ ಹಾಲಿ ದಿಗ್ಗಜರಾದ ಕೊಹ್ಲಿ-ರೋಹಿತ್ ನಡುವಿನ ಕಾಳಗ ನೋಡಲು ಜನ ಉತ್ಸುಕರಾಗಿರುತ್ತಾರೆ. ಈ ಪಂದ್ಯ ಸಂಜೆ 7.30 ಕ್ಕೆ ನಡೆಯುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ